ಚಳ್ಳಕೆರೆ :
ಜಲಾವೃತಗೊಂಡ ರೈಲ್ವೆ ಕೆಳ ಸೇತುವೆ ವಿದ್ಯಾರ್ಥಿಗಳ
ಪರದಾಟ
ಹೊಳಲ್ಕೆರೆಯಲ್ಲಿ ಸತತ ಬೀಳುತ್ತಿರುವ ಮಳೆಯಿಂದಾಗಿ,
ಹೊಸನಗರ ಬಡಾವಣೆಗೆ ಸಂಪರ್ಕ ಕಲ್ಪಿಸುವ ರೈಲ್ವೆ, ಕೆಳ
ಸೇತುವೆಯಲ್ಲಿ, ಸುಮಾರು ಒಂದು ಅಡಿಗೂ ಹೆಚ್ಚು ನೀರು
ನಿಂತಿದೆ.
ಇದರಿಂದ ಸಿದ್ಧರಾಮೇಶ್ವರ ಪ್ರೌಢಶಾಲೆ ಹಾಗೂ
ಜನತಾ ಕಾಲೋನಿಯ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆಯ ವಿದ್ಯಾರ್ಥಿಗಳು, ಹಾಗೂ ಶಿಕ್ಷಕರು ನೀರಿನಲ್ಲಿ ನಡೆದು
ಬರುವಂತಾಗಿದೆ.
ಆದರೆ ಈವರೆಗೂ ಕೂಡ ಕ್ರಮ ಕೈಗೊಂಡಿಲ್ಲ.
ನೀರಿನಲ್ಲಿ ನಡೆದು ಹೋಗುವುದು, ನಮಗೆ ಅನಿವಾರ್ಯವಾಗಿದೆ
ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದೂರಿದ್ದಾರೆ.