ಯುವಕರು ಮೊಬೈಲ್ ಗೀಳು ಬಿಟ್ಟು ಕ್ರೀಡೆಗೆ ಆದ್ಯತೆ ನೀಡಿ. ಮಾಜಿ ಗ್ರಾಮ ಪಂಚಾಯತಿ ಸದಸ್ಯ ಹೊಸಹಳ್ಳಿ ಎನ್ ತಿಪ್ಪೇಸ್ವಾಮಿ.
ನಾಯಕನಹಟ್ಟಿ:: ಯುವಕರು ಮೊಬೈಲ್ ಗೀಳು ಬಿಟ್ಟು ಕ್ರೀಡೆಗಳಿಗೆ ಹೆಚ್ಚಿನ ಒತ್ತನ್ನು ನೀಡಿ ಎಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯ ಹೊಸಹಳ್ಳಿ ಎನ್. ತಿಪ್ಪೇಸ್ವಾಮಿ ಹೇಳಿದ್ದಾರೆ.
ಶನಿವಾರ ಪಟ್ಟಣದ ಮಲ್ಲೂರಹಳ್ಳಿ ಮುಖ್ಯ ರಸ್ತೆ ಗೊಂಚಿಗರ್ ಮಟ್ಟಿ ಕ್ರೀಡಾಂಗಣದಲ್ಲಿ ಪಟ್ಟಣದ 8 ಮತ್ತು 9ನೇ ವಾರ್ಡಿನ ಕ್ರಿಕೆಟ್ ಕ್ರೀಡಾಪಟುಗಳು ಹಟ್ಟಿ ಪ್ರೀಮಿಯರ್ ಲಿಗ್.
ಕ್ರಿಕೆಟ್ ಕ್ರೀಡಾಕೂಟವನ್ನು ಉದ್ಘಾಟಿಸಿ ಟೇಪ್ ಕತ್ತರಿಸುವ ಮೂಲಕ ಚಾಲನೆಯನ್ನು ನೀಡಿದರು. ನಂತರ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಕ್ರೀಡೆಗಳು ಮರೀಚಿಕೆಯಾಗಿವೇ ಕ್ರೀಡಾಪಟುಗಳು ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಉತ್ತಮ ಕ್ರೀಡಪಟುಗಳಾಗಿ ಆಟವನ್ನು ಆಡಬೇಕು ಇನ್ನು ಮುಂದಿನ ದಿನಗಳಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ ಪ್ರೋತ್ಸಹಿಸುವುದಾಗಿ ಭರವಸೆಯನ್ನು ನೀಡಿದರು.
ಇನ್ನೂ ಇದು ವೇಳೆ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಡಿ. ಚೌಡಪ್ಪ ಮಾತನಾಡಿದರು ಗ್ರಾಮೀಣ ಪ್ರದೇಶದ ಯುವಕರು ಇತ್ತೀಚಿನ ದಿನಗಳಲ್ಲಿ ದುಶ್ಚಟಗಳಿಗೆ ತುತ್ತಾಗುತ್ತಿರುವುದು ಹೆಚ್ಚಾಗಿದೆ ಆದರಿಂದ ಯುವಕರು ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಅವುಗಳನ್ನು ಬದಿಗೊತ್ತಿ ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯ.
ಕ್ರೀಡೆಯಿಂದ ದೈಹಿಕ ಸಾಮಾಜಿಕ ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುವುದು ಜೊತೆಗೆ ವೈಯುಕ್ತಿಕ ವಿಕಸನಗೊಳಿಸುತ್ತದೆ ಎಂದರು.
ಬಹುಮಾನದಾನಿಗಳು.
ಪ್ರಥಮ ಬಹುಮಾನ . ಪಟ್ಟಣ ಪಂಚಾಯತಿ ಸದಸ್ಯ ನಭೀಲ್ ಅನ್ಸರ್ ಮೊಳಕಾಲ್ಮೂರು.
ಮತ್ತು ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಮುಸ್ತಾಕ್ ಮೊಳಕಾಲ್ಮೂರು.
ದ್ವಿತೀಯಬಹುಮಾನ ಎನ್ ನಿರಂಜನ್ ದಲಿತ ಯುವ ಮುಖಂಡ ಹಾಗೂ ಮೀಸೆ ನಾಗರಾಜ್ ಎಸ್ ಡಿ ಎಂ ಸಿ ಅಧ್ಯಕ್ಷ. ನಾಯಕನಹಟ್ಟಿ,
ಇದೇ ಸಂದರ್ಭದಲ್ಲಿ ಪಟ್ಟಣದ 8 ಮತ್ತು 9ನೇ ವಾರ್ಡಿನ ಕ್ರಿಕೆಟ್ ಕ್ರೀಡಾಕೂಟದ ಕ್ರೀಡಾಪಟುಗಳ ತಂಡದ ಹೆಸರು ಗೇಮ್ ಚೇಂಜರ್ಸ್. ಭೀಮ್ ವಾರಿಯರ್ಸ್, ಎಬಿಪಿ ಹಿಟ್ಟರ್ಸ. ಒನ್-8 ತಂಡದ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಗ್ರಾಮಸ್ಥರು ಇದ್ದರು