ಚಳ್ಳಕೆರೆ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕಾಗಿ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ನೀಡಿರುವ ವರದಿಯನ್ನು ಕೂಡಲೆ ಜಾರಿಗೊಳಿಸಲು ಆಗ್ರಹಿಸಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳ 100 ನೇ ದಿನದ ಅಹೋರಾತ್ರಿ ಧರಣಿಯ ಬೆಂಬಲಿಸಿ ಚಳ್ಳಕೆರೆ ನಗರದಲ್ಲಿ ಬೃಹತ್ ಪ್ರತಿಭಟನ ಹೋರಾಟಕ್ಕೆ ತಾಲೂಕಿನ ಸಮಸ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ, ವಿವಿಧ ಪಕ್ಷದ ಮುಖಂಡರ ಜೊತೆಗೆ ನಾಗರೀಕರು ಈ ಪ್ರತಿಭಟನಾ ಹೋರಾಟದಲ್ಲಿ ಸಾಕ್ಷಿಯಾಗಿದ್ದರು.


ಚಳ್ಳಕೆರೆಯ ಚಿತ್ರದುರ್ಗ ರಸ್ತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದ ಡಾ. ಜಗಜೀವನರಾಂ ಪ್ರತಿಮೆ ಮುಂಭಾಗದಿಂದ ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಶ್ರೀ ವೀರಭದ್ರಸ್ವಾಮಿ ದೇವಾಲಯದ ರಾಜಾ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಜೈಕಾರ ಮೊಳಗಿಸುತ್ತಾ ನೆಹರು ವೃತ್ತದಲ್ಲಿ ಮೀಸಲಾತಿ ಹೋರಾಟದಲ್ಲಿ ಘೋಷಣೆಗಳನ್ನು ಕೂಗುತ್ತಾ ಬೆಂಬಲಿಸಿದರು.


ಮೀಸಲಾತಿ ಹೋರಾಟದಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಫೆಬ್ರುವರಿ10 ರಿಂದ ಅಹೋರಾತ್ರಿ ಸತ್ಯಾಗ್ರಹ ಮಾಡುತ್ತಿರುವ ಶ್ರೀವಾಲ್ಮೀಕಿ ಸ್ವಾಮೀಜಿ ಅಹೋರಾತ್ರಿ ಧರಣಿ ಮಾಡುತ್ತಿದಾರೆ, ಪ್ರಸ್ತುತ ರಾಜ್ಯ ಸರಕಾರ ಒಂದು ಧರ್ಮಕ್ಕೆ ಸೀಮಿತವಾಗದೆ ಬೇರೆ ಬೇರೆ ಕಾರಣಗಳನ್ನು ಹೊಡ್ಡಿ ಜನ ಸಾಮಾನ್ಯರಿಗೆ ಸಂವಿಧಾನದ ಆಶಯಗಳಿಗೆ ಬದ್ಧವಾಗಿ ನಡೆದುಕೊಳ್ಳಬೇಕು, ಇಂದು ಏಕಕಾಲಕ್ಕೆ ರಾಜ್ಯದಲ್ಲಿ 186 ತಾಲೂಕಿನಲ್ಲಿ ಪ್ರತಿಭಟನೆ ನಡೆಯುತ್ತದೆ, ಚುನಾವಣೆ ಸಂಧರ್ಭದಲ್ಲಿ ನಾವು ಅಧಿಕಾರಕ್ಕೆ ಬಂದರೆ ಇಪ್ಪತ್ತು ನಾಲ್ಕು ಗಂಟೆಯಲ್ಲಿ ಪರಿಶಿಷ್ಠ ಪಂಗಡದ ಶಾಸಕರಿಗೆ ಉಪ ಮುಖ್ಯ ಮಂತ್ರಿ ಸ್ಥಾನ ನೀಡುತ್ತೆವೆ, ಮೀಸಲಾತಿ ಕೊಡಿಸುತ್ತೆವೆ ಎಂದು ಹೇಳುವವರು ಮೂರುವರೆ ವರ್ಷ ಹಾಗಿದೆ ಆದರೆ ಇದುವರೆಗೆ ಮೀಸಲಾತಿ ಬಗ್ಗೆ ಚಾಕರ ಎತ್ತುತ್ತಿಲ್ಲ ರಾಜ್ಯದ 224 ಶಾಸಕರು ಸ್ವಾಮೀಜಿ ಧರಣಿಗೆ ಸ್ಥಳಕ್ಕೆ ಬಂದು ಬೆಂಬಲ ನೀಡಿದ್ದಾರೆ, ಮೂರು ಬಾರಿ ನಾನೇ ಅಧಿವೇಶನದಲ್ಲಿ ಮೀಸಲಾತಿ ಪರ ಧ್ವನಿ ಎತ್ತಿದ್ದೆನೆ ಎಂದರು

ಜೆಡಿಎಸ್ ನಿಯೋಜಿತ ಅಭ್ಯರ್ಥಿ ಎಂ.ರವೀಶ್ ಕುಮಾರ್, ಪಕ್ಷತೇರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ, ನಗರಸಭಾ ಸದಸ್ಯ ಕೆ.ವೀರಭದ್ರಯ್ಯ, ರೈತ ಮುಖಂಡ ಕೆ.ಪಿ.ಭೂತಯ್ಯ, ಜಿಪಂ.ಮಾಜಿ ಸದಸ್ಯ ಬಿ.ಪಿ.ಪ್ರಕಾಶ್ ಮೂರ್ತಿ, ಮಾಜಿ ತಾಲೂಕು ಪಂಚಾಯಿತ್ ಸದಸ್ಯ ಹೆಚ್.ಸಮರ್ಥರಾಯ್, ದಲಿತ ಮುಖಂಡ ಟಿ.ವಿಜಯ್ ಕುಮಾರ್, ಮಹಿಳಾ ಸಂಘದ ಅಧ್ಯಕ್ಷೆ ಸೌಭಾಗ್ಯ, ಜಯಕುಮಾರ್, ಸೂರನಾಯಕ, ಮಂಜುನಾಥ್, ಭಿಮನಕೆರೆ ಶಿವಮೂರ್ತಿ, ಚೌಳೂರು ಪ್ರಕಾಶ್, ಗಾಂಧಿನಗರದ ಡಿ.ಚಂದ್ರು, ಸೈಯದ್, ಇನ್ನೂ ಜನಪ್ರತಿನಿಧಿಗಳು ಇತರ ಪ್ರಮುಖ ಮುಖಂಡರು ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟಕ್ಕೆ ಇಂದು ಬೃಹತ್ ಪ್ರತಿಭಟನೆಯ ಮೂಲಕ ಚಳ್ಳಕೆರೆ ನಗರವನ್ನು ಸ್ವಯಂ ಘೋಷಿತ ಬಂದ್ ಮಾಡಲಾಗಿತ್ತು, ಗ್ರಾಮಾಂತರ ಪ್ರದೇಶಗಳಿಂದ ಸುಮಾರು ಎರಡು ಸಾವಿರ ಜನಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಗೆ ಸಾಕ್ಷಿಯಾದರು,

ಬೈಟ್ :

ಅನಿವಾರ್ಯವಾಗಿ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ, ಕಳೆದ ಬಾರಿ ಚಳ್ಳಕೆರೆ ಕ್ಷೇತ್ರದಲ್ಲಿ 2018 ಚುನಾವಣೆಯಲ್ಲಿ ಈದೇ ಮೂರು ಜನ ಅಭ್ಯರ್ಥಿಗಳು ಮುಖಾ ಮುಖಿಯಾಗಿ ಚುನಾವಣೆ ಎದುರಿಸಿದ್ದೆವೆ ಆದರೆ ಚುನಾವಣೆ ಬೇರೆ ಮೀಸಲಾತಿ ಬೇರೆ ಆದ್ದರಿಂದ ಒಗ್ಗೂಡಿ ಎಲ್ಲಾರು ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ನಮ್ಮ ಹಕ್ಕು ಪಡೆಯೋಣ, ಚುನಾವಣೆ ಸಂಧರ್ಭದಲ್ಲಿ ನಾವು ಅಧಿಕಾರಕ್ಕೆ ಬಂದರೆ ಇಪ್ಪತ್ತು ನಾಲ್ಕು ಗಂಟೆಯಲ್ಲಿ ಪರಿಶಿಷ್ಠ ಪಂಗಡದ ಶಾಸಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುತ್ತೆವೆ, ಮೀಸಲಾತಿ ಕೊಡಿಸುತ್ತೆವೆ ಎಂದು ಹೇಳುವ ಬಿಜೆಪಿ ಆಡಳಿತ ಸರಕಾರ ಮೂರುವರೆ ವರ್ಷ ಹಾಗಿದೆ ಆದರೆ ಇದುವರೆಗೆ ಮೀಸಲಾತಿ ಬಗ್ಗೆ ಚಾಕರ ಎತ್ತುತ್ತಿಲ್ಲ — ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ಕ್ಷೇತ್ರ

About The Author

Namma Challakere Local News
error: Content is protected !!