ಚಳ್ಳಕೆರೆ : ಸಂವಿಧಾನ, ಸರ್ಕಾರದ ಮುಖ್ಯ ಆಶಯ ಪ್ರಾಥಮಿಕ ಹಾಗೂ ಪ್ರೌಢಹಂತದ ವಿದ್ಯಾರ್ಥಿಗಳು ಕಡ್ಡಾಯವಾಗಿ ಗುಣಾತ್ಮಕ ಶಿಕ್ಷಣ ಪಡೆದು ಸ್ವಾಸ್ಥö್ಯ ಸಮಾಜ ನಿರ್ಮಾಣಕ್ಕೆ ಅನುವು ಮಾಡಿಕೊಡುವುದಾಗಿದೆ ಎಂದು ಕಾಮಸಮುದ್ರ ಗ್ರಾಮದ ಸಹಿಪ್ರಾ ಶಾಲಾ ಮುಖ್ಯಶಿಕ್ಷಕ ಸಿ.ಹೇಮರಾಜು ಹೇಳಿದರು


ಚಳ್ಳಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಳೆಬಿಲ್ಲು – ಮಕ್ಕಳ ಹಬ್ಬ ಕಾರ್ಯಕ್ರಮದಡಿ ತಮ್ಮ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಜಾತ್ರೆ, ಹಬ್ಬಗಳ ಸನ್ನಿವೇಶವನ್ನು ಸೃಷ್ಟಿಸಿ ಮಾತನಾಡಿ ನಮ್ಮ ಮಕ್ಕಳಿಗೆ ಚಿಕ್ಕಂದಿನಲ್ಲೇ ದೇಶಿ ಸಂಸ್ಕೃತಿ, ಪರಂಪರೆಯನ್ನು ಮನವರಿಕೆ ಮಾಡಿಕೊಡುವುದೂ ಸಹ ನಮ್ಮ ಹೊಣೆಯಾಗಿದೆ ಎಂದರು


ದೈಹಿಕ ಶಿಕ್ಷಣ ಶಿಕ್ಷಕ ಬಿ ವೀರಣ್ಣ ಮಾತನಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಕರೊನಾ ಹಿನ್ನೆಲೆ ಶಾಲಾ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಉತ್ತಮಪಡಿಸಿ ಶಾಲಾ ಪರಿಸರದಲ್ಲಿ ಸಹಜ ಕಲಿಕೆಗೆ ಒತ್ತು ನೀಡಿ ಅವರ ಮೇಲೆ ಪಠ್ಯವನ್ನು ಹೇರದೇ ಹದಿನೈದು ದಿನಗಳ ಕಾಲ ಸೃಜನಾತ್ಮಕ ಚಟುವಟಿಕೆಗಳನ್ನ ಆಯೋಜಿಸಿ ಆಟ, ಚಿತ್ರಕಲೆ, ಮತ್ತಿತರೆ ಚಟುವಟಿಕೆಗಳನ್ನನಿಯಮಿತವಾಗಿ ಕೈಗೊಂಡು ಶಾಲೆ ಎಂದರೆ ಮಕ್ಕಳಿಗೆ ಹೊರೆಯಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಹಬ್ಬ ಜಾತ್ರೆಗಳನ್ನ ಶಾಲಾ ಆವರಣದಲ್ಲಿ ಸೃಷ್ಟಿಸಿ ನಮ್ಮ ಸಂಸ್ಕೃತಿಯನ್ನು ತಿಳಿಸುವುದಾಗಿದೆ ಎಂದರು


ಇದೇ ವೇಳೆ ಜಾತ್ರೆಯ ಪರಿಕಲ್ಪನೆಯನ್ನ ಮಕ್ಕಳಲ್ಲಿ ಮೂಡಿಸಲು ಶಾಲಾ ಆವರಣದಲ್ಲಿ ರಥೋತ್ಸವ, ವಿವಿಧ ಅಂಗಡಿಗಳು, ಕಾಸ್ಮಟಿಕ್ಸ್ ಅಂಗಡಿಗಳನ್ನ ತೆರೆದು ಮಕ್ಕಳಿಂದಲೇ ಕೆಲ ಚಟುವಟಿಕೆಗಳನ್ನಮಾಡಿಸಿದರು.

ಗ್ರಾಮಸ್ಥರು ಶಾಲಾ ಆವರಣಕ್ಕೆ ಬಂದು ಮಕ್ಕಳ ಹಬ್ಬದಲ್ಲಿ ಪಾಲ್ಗೊಂಡು ಶಿಕ್ಷಕರು ಮತ್ತು ಮಕ್ಕಳ ಚಟುವಟಿಕೆಯಲ್ಲಿ ಪಾಲ್ಗೊಂಡು ಸಂತಸ ವ್ಯಕ್ತಪಡಿಸಿದರು


ಸಂದರ್ಭದಲ್ಲಿ ಮುಖ್ಯಶಿಕ್ಷಕ ಸಿ.ಹೇಮರಾಜು, ಶಿಕ್ಷಕರಾದ ವೀರಣ್ಣ, ಪಾರ್ವತಮ್ಮ, ಎಚ್.ರಾಜು, ಕೆ.ಶೈಲಜಾ, ಟಿ.ಮೋಹನ, ಆರ್.ರಾಕೇಶ ಶಾಲಾ ಸಮಿತಿಯವರು ಪೋಷಕರು ಗ್ರಾಮಸ್ಥರು ಇದ್ದರು

About The Author

Namma Challakere Local News
error: Content is protected !!