ಚಳ್ಳಕೆರೆ : ಸಿಬ್ಬಂದಿಗಳು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ವಿನಾಕಾರಣ ಪ್ರತಿಯೊಬ್ಬ ಸಿಬ್ಬಂದಿಯನ್ನು ವಿಚಾರಿಸುವುದು ಹಾಗೂ ಸಿಬ್ಬಂದಿಗಳ ವೀಡಿಯೋ ಮಾಡಿ ಸಾರ್ವಜನಿಕರ ಕೆಲಸ ಹಾಗೂ ಸರ್ಕಾರಿ ಕರ್ತವ್ಯ ನಿರ್ವಹಿಸಲು ಅಡಚಣೆ ಉಂಟು ಮಾಡುವ ಕೆಲವು ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಕಂದಾಯ ನೌಕರರು ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.


ನಗರದ ತಾಲೂಕು ಕಚೇರಿಯಲ್ಲಿ ಇಂದು ತಾಲೂಕು ಕಚೇರಿ ಸಿಬ್ಬಂದಿಗಳು ಒಡಗೂಡಿ ಕತ್ಯರ್ವ ನಿರ್ವಹಿಸುವ ಸಂಧರ್ಭದಲ್ಲಿ ವಿನಾಃ ಕಾರಣ ಪೇಸ್ ಬುಕ್ ಲೈವ್ ಮೂಲಕ ನಮ್ಮ ಕರ್ತವ್ಯಕೆ ಅಡ್ಡಿಪಡಿಸಿದಲ್ಲದೆ, ನಮ್ಮ ಖಾಸಗಿ ಜೀವನಕ್ಕೆ ಧಕ್ಕೆ ತರುವಂತ ಕೆಲಸವನ್ನು ಕೆಲ ಪಕ್ಷದ ಮುಖಂಡರುಗಳು, ಮಾಡುತ್ತಿದ್ದಾರೆ ಎಂದರು ಮನವಿ ನೀಡಿದ್ದಾರೆ.


ಮನವಿ ಸ್ವೀಕರಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಕಛೇರಿಯ ಕೆಲಸ ಕಾರ್ಯಗಳ ಗೌಪ್ಯತೆ ಕಾಪಾಡುವುದು ನಮ್ಮ ಕರ್ತವ್ಯವಾಗಿದ್ದು, ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಮಾತನಾಡಿಸಿ, ನೌಕರರ ಆತ್ಮಸ್ಥೈರ್ಯ ಕುಂಠಿತವಾಗಲು ಲೈವ್ ವಿಡೀಯೋ ಚಿತ್ರಿಕರಣ ಮಾಡುವುದು ಕಾನೂನು ಬಾಹಿರ ಇಲಾಖೆ ಮುಖ್ಯಸ್ಥರ, ಹಾಗೂ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಒಪ್ಪಿಗೆ ಇಲ್ಲದೆ ಸರಕಾರಿ ಕಛೇರಿಯಲ್ಲಿ ವಿಡಿಯೋ ಮಾಡುವುದು ಅಪರಾಧ ಆದ್ದರಿಂದ ಮುಂದಿನ ದಿನಗಳಲ್ಲಿ ಈರೀತಿಯಾಗದಂತೆ ಪೊಲೀಸ್ ಇಲಾಕೆಯೊಂದಿಗೆ ಪತ್ರ ರವಾನಿಸಿ ಸೂಕ್ತ ಬಂದೋ ಬಸ್ತ್ ಹೊದಗಿಸಲಾಗುವುದು ಎಂದಿದ್ದಾರೆ.


ಕಂದಾಯ ನೀರಿಕ್ಷ ಲಿಂಗೇಗೌಡ ಮಾತನಾಡಿ, ಲೈವ್ ವಿಡಿಯೋ ಮಾಡುವುದರಿಂದ ಮುಜಗರ ಉಂಟಾಗುವಂತೆ ನಡೆದುಕೊಳ್ಳುತ್ತಿರುತ್ತಾರೆ. ಮತ್ತು ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ಬಂದು ಹೋಗುವ ಪ್ರತಿಯೊಬ್ಬರ ಚಲನವಲನಗಳನ್ನು ಗಮನಿಸುತ್ತಾ ವೀಡಿಯೋ ಮಾಡುತ್ತಿರುತ್ತಾರೆ. ಇದರಿಂದಾಗಿ ಸಿಬ್ಬಂದಿಗಳಿಗೆ ಸರ್ಕಾರಿ ಕರ್ತವ್ಯ ನಿರ್ವಹಿಸಲು ತುಂಬಾ ತೊಂದರೆಯಾಗುತ್ತಿರುವುದರಿಂದ ಹಾಗೂ ಅಭಿಲೇಖಾಲಯದಲ್ಲಿ ಕೆಲವೊಂದು ಮುಖ್ಯವಾದ ದಾಖಲೆಗಳನ್ನು ಅನಧಿಕೃತವಾಗಿ ಮಾಡುತ್ತಾ ದೃಷ್ಯಾವಳಿಗಳನ್ನು ಫೇಸ್‌ಬುಕ್‌ಗೆ ವೀಡಿಯೋ ಬಹಿರಂಗಪಡಿಸುತ್ತಾ ಈ ಕೃತ್ಯವನ್ನು ಪದೇ ಪದೇ ಮುಂದುವರೆಸುತ್ತಿರುತ್ತಾರೆ. ಇನ್ನು ಮುಂದೆ ಈ ತರಹ ಆಗದಂತೆ ಮನವಿ ನೀಡಿದ್ದಾರೆ.


ಈದೇ ಸಂಧರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಸಂಧ್ಯಾ, ಆಹಾರ ನೀರಕ್ಷಕ ಶಿವಾಜಿ, ಶಿರಸ್ತೆದಾರ್ ಶಕುಂತಲಾ, ಸದಾಶಿವಪ್ಪ, ಗಿರೀಶ್, ಕಾರ್ತಿಕ್, ಗೊಂವಿದ್ ನಾಯ್ಕ್, ಕಾಂತರಾಜ್, ಸುರೇಶ್, ಅಜೆಯ್, ಶ್ರೀನಿವಾಸ್, ಶಿವಲೀಲಾ, ಸುಮಲತಾ, ಪ್ರಕಾಶ್, ಗುರುಲಿಂಗಣ್ಣ, ಪ್ರಕಾಶ್, ಓಬಳೇಶ್, ಮಂಜುನಾಥ್, ಪುಷ್ಪಲತಾ, ನಾಗರಾಜ್, ರಾಜೇಶ್, ಇತರರು ಇದ್ದರು.

Namma Challakere Local News
error: Content is protected !!