ಚಳ್ಳಕೆರೆ :
ರಾಜ್ಯಪಾಲರ ನಡೆ ಸರಿಯಲ್ಲ ಸಿಟಿ ಕೃಷ್ಣ ಮೂರ್ತಿ
ಅಬ್ರಾಹಿಂ 200 ಪುಟಗಳ ದೂರಿನ ಆಧಾರದ ಮೇಲೆ
ರಾಜ್ಯಪಾಲರು ಸಿಎಂ ಸಿದ್ದರಾಮಯ್ಯಗೆ 6 ಗಂಟೆಗಳಲ್ಲಿ ಶೋಕಾಸ್
ನೊಟೀಸ್ ನೀಡಿದ್ದು, ಸರಿಯಲ್ಲವೆಂದು ಹಿಂದುಳಿದ ವರ್ಗಗಳ
ಮುಖಂಡ ಸಿಟಿ ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ತಪ್ಪಾಗಿದೆ
ವಿವರಣೆ ಕೊಡಿ ಎಂದು ಕೇಳದ ರಾಜ್ಯಪಾಲರು, ನಿಮ್ಮ ಮೇಲೆ
ಆರೋಪ ಬಂದಿದೆ ತನಿಖೆಗೆ ಯಾಕೆ ಆದೇಶಿಸಬಾರದೆಂದು ಕೇಳಿದ್ದು
ಸರಿಯಲ್ಲ.
ಇದರ ವಿರುದ್ಧ ಬೆಂಗಳೂರಿನ ರಾಜಭವನ ಚಲೋಗೆ
ನಮ್ಮ ಬೆಂಬಲವಿದೆ ಎಂದರು.