ಚಳ್ಳಕೆರೆ :
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ
ಹೌದು ಚಳ್ಳಕೆರೆ ತಾಲೂಕಿನ ಪುರ್ಲಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಹೊದಗಿಸುವ ಸಲುವಾಗಿ
ವಿ ಬ್ಯಾಂಕ್ ಅನಿಮಲ್ ಪ್ರೈವೇಟ್ ಲಿಮಿಟೆಡ್ ಹಾಗೂ ಪಶುಪಾಲನಾ ಇಲಾಖಾ ವತಿಯಿಂದ ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಉಚಿತವಾಗಿ ಸ್ಥಾಪಿಸಿದೆ.
ಈ ಕಾರ್ಯಕ್ರಮದಲ್ಲಿ ಗ್ರಾಮದ ಮುಖ್ಯ ಪಶುವೈಧ್ಯಾಧಿಕಾರಿ ಡಾ. ರಾಜಣ್ಣ, ವಿ ಬ್ಯಾಂಕ್ ಕಂಪನಿಯ ಸುರೇಶ್, ಸುಮನ್ , ಹಾಗೂ ಶಾಲೆಯ ಶಿಕ್ಷಕರು, ಎಸ್ ಡಿಎಂಸಿ ಅಧ್ಯಕ್ಷರು ಗ್ರಾಮ ಪಂಚಾಯವತಿ ಅಧ್ಯಕ್ಷ ಆನಂದ್ ಹಾಗೂ ಉಪಾಧ್ಯಕ್ಷ ಊರಿನ ಪ್ರಮುಖರಾದ ರಾಜಣ್ಣ ಮುಂತಾದವರು ಪಾಲ್ಗೊಂಡಿದ್ದರು