ಚಳ್ಳಕೆರೆ :
ಧೃವ ಸರ್ಜಾರನ್ನು ಕಣ್ಣುಂಬಿಕೊಳ್ಳಲು ಬಂದು
ಭಾವುಕರಾದ ಅಭಿಮಾನಿ
ಚಿತ್ರದುರ್ಗದ ಅಭಿಮಾನಿಯೊಬ್ಬರು ಧೃವ ಸರ್ಜಾ ಅವರನ್ನು
ಕಣ್ಣುಂಬಿಕೊಳ್ಳಲು ಆಗಮಿಸಿದ್ದು,
ಈ ಸಮಯದಲ್ಲಿ
ಭಾವುಕರಾದ ಘಟನೆ ನಡೆಯಿತು. ಮುರುಘಾ ಮಠಕ್ಕೆ ಧೃವ
ಸರ್ಜಾ ಬರುತ್ತಾರೆಂದು ತಿಳಿಯುತ್ತಿದ್ದಂತೆ ಅಭಿಮಾನಿ ಚಿತ್ರ,
ಸಣ್ಣವಳಿದ್ದಾಗಿನಿಂದಲೂ ಅಮ್ಮ ನಿಮ್ಮ ಮಾವ ಬಂದಿದ್ದಾರೆ
ನೋಡು ಎಂದು ಟಿವಿಯಲ್ಲಿ ಧೃವ ಸರ್ಜಾ ಅವರನ್ನು
ತೋರಿಸುತ್ತಿದ್ದರು,
ಅಂದಿನಿಂದಲೂ ನಾನು ಅವರನ್ನು ಮಾವ
ಅಂತ ಕರೆಯುತ್ತಿದ್ದು, ಅವರನ್ನು ನೋಡಲು ಬಂದಿದ್ದೇನೆ ಎಂದು
ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಚಿತ್ರ ಹೇಳಿದಳು.