ಚಳ್ಳಕೆರೆ :
ಡಿವೈಎಸ್. ಪಿ ಚೈತ್ರಾ ಅಮಾನತಿಗೆ ಒತ್ತಾಯಿಸಿ ದೂರು
ನೀಡಿದ ರೈತರು
ರೈತ ಹೋರಾಟಗಾರರ ವಿರುದ್ಧ ಲಘುವಾಗಿ ಮಾತನಾಡಿ,
ರೈತ ನಾಯಕರಿಗೆ ಅವಮಾನ ಮಾಡಿದ ಹಾಗೂ ಹಿರಿಯೂರು
ತಾಲೂಕಿನಾದ್ಯಂತ ಇಸ್ಪೀಟ್, ಜೂಜು, ಸರಣಿ ಮನೆಗಳ್ಳತನ, ಚೈನ್
ಕಳವು ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾದ,
ಹಿರಿಯೂರು
ಡಿವೈಎಸ್. ಪಿ ಚೈತ್ರಾರನ್ನು ಕೂಡಲೇ ಅಮಾನತುಗೊಳಿಸುವಂತೆ
ರೈತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ರಾಜ್ಯ ಪೊಲೀಸ್
ಮಹಾ ನಿರ್ದೇಶಕರಿಗೆ ದೂರು ನೀಡಿ ಒತ್ತಾಯಿಸಿದ್ದಾರೆ.