ಚಳ್ಳಕೆರೆ :
ದೇವತೆಗಳ ದರ್ಶನ ಪಡೆದ ಭಕ್ತರು
ಆಶಾಢ ಮಾಸದ ಕೊನೆಯಲ್ಲಿ ಆಚರಿಸುವ ಹೋಳಿಗೆ ಅಮ್ಮನ
ಹಬ್ಬದ ಆಚರಣೆ ಹಿನ್ನೆಲೆಯಲ್ಲಿ, ನಗರದ ಮೂರು ದೇವತೆಗಳಾದ
ಅಂತರಘಟ್ಟಮ್ಮ, ಏಕನಾಥೇಶ್ವರಿ ಹಾಗು ಗಾಳಿಮಾರಮ್ಮನಿಗೆ
ವಿವಿಧ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ, ಭಕ್ತರು ದೇವತೆಯ
ದರ್ಶನ ಪಡೆದು ಪುನೀತರಾದರು.