ಚಳ್ಳಕೆರೆ : ರಾತ್ರಿಯಾದರೆ ಸಾಕು ಕತ್ತಲು ಕವಿದ ರಸ್ತೆಗಳು, ಬೆಳಕಿನ ವ್ಯವಸ್ತೆ ಇಲ್ಲದೆ ರಾತ್ರಿ ಈಡೀ ಸಾರ್ವಜನಿಕರು ಹೈರಾಣಾಗುವ ಪರಿಸ್ಥಿತಿ ಬಂದೋದಗಿದೆ.
ಹೌದು ಚಳ್ಳಕೆರೆ ತಾಲೂಕಿನ
ಚೆನ್ನಮ್ಮನಾಗತಿಹಳ್ಳಿ ಗ್ರಾಮದಲ್ಲಿ ಕಳೆದ ಹಲವಾರು ದಿನಗಳಿಂದ ಬೀದಿ ದೀಪಗಳು ಬೆಳಗದೆ ಇರುವುದರಿಂದ ಸಂಜೆಯಾದರೆ ಸಾಕು ಮನೆ ಸೇರುವಂತಾಗಿದೆ.
ಇನ್ನೂ
ವಿಶಜಂತುಗಳ ಕಾಟದಿಂದ ಮನೆಯಿಂದ ಹೊರಗಡೆ ಬರುವಾಗಿಲ್ಲ
ಇಂತಹ ಗ್ರಾಮಗಳನ್ನು ಪರಿಗಣಿಸಿ ಕಳೆದ ಹಲವು ದಿನಗಳ ಹಿಂದೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ತಮ್ಮ ಅನುದಾನದ ಹೊದಗಿಸಿ ಈ ಗ್ರಾಮಗಳಲ್ಲಿ ಹೈ ಮಾಸ್ಕ್ ದೀಪ ಹಾಕಿಸಿದ್ದರು
ಆದರೆ ಕಳೆದ ಹಲವು ದಿನಗಳಿಂದ ಬೀದಿ ದೀಪದಲ್ಲಿ ಸಮಸ್ಯೆ ಇದೆ ಆದರೆ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾತ್ರ ನಮಗೆ ಸಂಬಂಧವೇ ಇಲ್ಲ ಎಂದು ಮೌನ ವಹಿಸಿದ್ದಾರೆ.
ಇತ್ತ ಸಾರ್ವಜನಿಕರು ಮಾತ್ರ ಕತ್ತಲು ಕವಿದ ವಾತವರಣದಲ್ಲಿ ಕಾಲ ದಾಡುತ್ತಿದ್ದಾರೆ.
ಇನ್ನಾದರೂ ಕತ್ತಲು ದೂರ ಮಾಡಿ ಬೆಳಕಿನ ವ್ಯವಸ್ಥೆ ಮಾಡುವರೋ ಕಾದು ನೋಡಬೇಕಿದೆ.