ಚಳ್ಳಕೆರೆ : ಮಹಿಳೆಯರು ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯುವುದರಿಂದ ಸ್ವಾವಲಂಭಿಗಳಾಗಿ ಬದುಕಬಹುದು ಎಂದು ತಾಪಂ ಇ.ಇ ಶಶಿಧರ್ ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಂಜೀವಿನಿ ಯೋಜನೆ ಸೆಲ್ಕೋ ಸೋಲರ್ ಸಂಸ್ಥೆ ಸಯಯೋಗದಲ್ಲಿ ಕೃಷಿ ಸಖಿ .ಪಶುಸಖಿ ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಮೊಬೈಲ್ ಆಪ್ ಮೂಲಕ ಡಿಜಿಟಲ್ ಅಜೀವಿಕಾ ನೊಂದಣೆ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿರು
ಒಂದು ಕಾಲದಲ್ಲಿ ಐದು ಸಾವಿರ ರೂ ಬೇಕೆಂದರೂ ಬೇರಯವರ ಮುಂದೆ ನಿಂತುಕೊಳ್ಳಬೇಕಿತ್ತು ಹೆಚ್ಚು ಬಡ್ಡಿ ನೀಡಿ ಸಾಲ ಪಡೆಯ ಬೇಕಿತ್ತು ಈಗ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಹಿಳೆಯರ ಸ್ವಾವಂಭಿ ಜೀವನ ನಡೆಸಲು ಸ್ವಯಂ ಉದ್ಯೋಗ .ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಮೂಲಕ ಮನೆ ಬಾಗಿಲಿ ಸಾಲ ಸೌಲನಭ್ಯ ನೀಡಲಾಗುತ್ತಿದೆ.
ಮಹಿಳೆಯರಿ ಹತ್ತು ಹಲವು ಸೌಲಭ್ಯಗಳನ್ನು ನೀಡುತ್ತಿದೆ ಸದುಪಯೋಗ ಮಾಡಿಕೊಂಡು ಮಕ್ಕಳಿಗೆ ಬಾಲ್ಯವಿವಾಹ ಮಾಡದೆ ಉತ್ತಮ ಶಿಕ್ಷಣ ಕೊಡಿಸಿ ಈ ದಿನದ ತರಬೇತಿ ಸದುಪಯೋಗ ಪಡಿಸಿಕೊಂಡು ಸಾರ್ವಜನಿಕಸೇವೆ ಮಾಡುವಂತೆ ತಿಳಿಸಿದರು.
ಸೆಲ್ಕೋ ಸೋಲರ್ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕ ಅಜಯ್ ಮಾತನಾಡಿ ಮಹಿಳಾ ಸಂಘದ ಸದಸ್ಯರಿಗೆ ಒಕ್ಕೂಟ ರಚಿಸಿ
ಸಂಜೀವಿನಿ ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಲಕ್
ಪತಿ ದೀದಿ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಲಯವು ಆಜೀವಿಕಾ
ರಿಜಿಸ್ಟರ್ ಅಪ್ಲಿಕೇಷನ್‌ನಿಂದ ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಎಲ್ಲಾ ಸ್ವ ಸಹಾಯ ಗುಂಪಿನ ಸದಸ್ಯರ ಜೀವನೋಪಾಯ ಮತ್ತು
ಆದಾಯದ ಮಾಹಿತಿಯನ್ನು ಕಲೆಹಾಕಿ, ಈ ಮಾಹಿತಿಯ ಅನುಗುಣವಾಗಿ ಸ್ವ ಸಹಾಯ ಗುಂಪಿನ ಸದಸ್ಯರಿಗೆ
ನೀಡಬೇಕಾದ ಹೆಚ್ಚಿನ ಬೆಂಬಲ ಮತ್ತು ಸಹಾಯದ ಬಗ್ಗೆ ಗಮನಹರಿಸಲು ಪೂರಕವಾಗುವಂತೆ ವ್ಯವಸ್ಥೆಯನ್ನು
ಕಲ್ಪಿಸಲಾಗಿದೆ. ಮಹಿಳೆಯರು ಒಳಗೆ ಮತ್ತುಬಹೊರಗೆ ಆಧಾಯ ಉತ್ಪನ್ನಗಳ ತಯಾರಿಕೆ ಮಾಡುತ್ತಿರುವ ಪಶು.ಕೃಷಿ.ಗುಡಿಕೈಗಾರಿಕೆ ಸೇರಿದಂತೆ ಎಲ್ಲಾ ಮಾಹಿಯನ್ನು ಅಜೀವಿಕಾ ರಿಜಿಸ್ಟರ್ ಮಾಡಬೇಕಿದೆ ಆದಾಯ ಉತ್ಪನ್ನಗಳ ಯಂತ್ರಗಳನ್ನು ಸಹ ನಿಮಗೆ ಪರಿಚಯ ಮಾಡಿಸಕಾಗುವುದು ನಿಮ್ಮ ವ್ಯಾಪ್ತಿಯ ಮಹಿಳೆಯರು ಸ್ವಾವಲಂಭಿ ಜೀವನ ನಡೆಸಲು ಆಧಾಯ ಉತ್ಪನ್ನಗಳ ಮಾಹಿತಿ ನೀಡ ಬೇಕು ತಿಳಿಸಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಲಿಂಗರಾಜ್ .ಸೆಲ್ಕೋ ಸಂಸ್ಥೆಯ ತಿಪ್ಪೇಸ್ವಾಮಿ. ಸಂಜೀವಿನಿ ಬಾಲರಾಜ್. ಪಶು.ಕೃಷಿ ಸಖಿಯರು ತರಬೇತಿ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.