ಎಮ್ಮೆ ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ.

ಚಳ್ಳಕೆರೆ:
ಜಾನುವಾರುಗಳನ್ನು ಮೇಯಿಸುತ್ತ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ ಮಾಡಿದ್ದು ವ್ಯಕ್ತಿಯ ತಲೆ , ಕಣ್ಣು ಮೂಗು ,ಹಣೆ ಕಿವಿ ಗಾಯಗೊಳಿಸಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಓಬಳಿಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕರಡಿ ದಾಳಿಗೊಳಗಾದ ವ್ಯಕ್ತಿ ಓಂಕಾರಪ್ಪ ( 56) ಎಂದು ತಿಳಿದು ಬಂದಿದ್ದು.

ಚಳ್ಳಕೆರೆ
ತಾಲೂಕಿನ ಗಡಿ ಗ್ರಾಮದ ಗ್ರಾಮದ ಹತ್ತಿರ ಕೆರೆಯಲ್ಲಿ ಈ ಘಟನೆ ನಡೆದಿದೆ.

ರೈತ ಓಂಕಾರಪ್ಪ ಎಂದಿನಂತೆ ಎಮ್ಮೆಗಳನ್ನ ಮೇಯಿಸಲು ಗ್ರಾಮದ ಸಮೀಪ ಕೆರೆ ಹತ್ತಿರ ಹೊಡೆದುಕೊಂಡು ಹೋಗಿದ್ದು ಸೋಮುವಾರ 3 ಗಂಟೆ ಸಮಯದಲ್ಲಿ ಕರಡಿ ಹಿಂದಿನಿಂದ ಬಂದು ವ್ಯಕ್ತಯ ಮೇಲೆ ಏಕಾಏಕಿ ದಾಳಿ ಮಾಡಿದ ಕರಡಿ ಕಣ್ಣು ಹಣೆ ತಲೆ ಮೂಗೂ ಗಾಯಗೊಳಿಸಿದೆ.

ಓಂಕಾರಪ್ಪ ಕಿರುಚುವ ಶಬ್ದವನ್ನು ಕೇಳಿ ಅಕ್ಕ ಪಕ್ಕದಲ್ಲಿ ಜಾನುವಾರುಗಳು ಮೇಯಿಸುತ್ತಿದ್ದ ಜನರು ಹತ್ತಿರ ಬಂದು ನೋಡಲಾಗಿ ಕರಡಿ ಜನರನ್ನು ನೋಡಿ ಓಡಿಹೋಗಿದೆ. ಗಾಯಗೊಂಡಿದ್ದ ಓಂಕಾರಪ್ಪನನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ನಂತರ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ

ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಹಿರಿಯೂರು ಉಪ ವಿಭಾಗ ಅರಣ್ಯ ಉಪಸಂರಕ್ಷಣಾಧಿಕಾ ಎಸ್ .ಸುರೇಶ್.
ಗಾಯಗೊಂಡಿದ್ದ ವ್ಯಕ್ತಿಯ ಪೋಷಕರಿಗೆ ಧೈರ್ಯ ತುಂಬಿ ‌ಓಕಾಂರಪ್ಪ ಇವರನ್ನ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಿ ಮಾತನಾಡಿ,ಕರಡಿ ದಾಳಿಗೊಳಗಾದ ವ್ಯಕ್ತಿ ಚಿಕಿತ್ಸೆಯ ವ್ಯಚ್ಚವನ್ನ ಇಲಾಖೆ ಬರಿಸಲಾಗುತ್ತದೆ. ಹಾಗೂ ಇಂತಹ ಘಟನೆಗಳು ಮರುಕಳಿಸಿದಂತೆ ಎಚ್ಚರ ವಹಿಸಲಾಗುತ್ತದೆ .ಗಡಿ ಗ್ರಾಮದ ಗ್ರಾಮಸ್ಥರು ಎಚ್ಚರಿಕೆಯಲ್ಲಿ ಇರುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ಆರ್ ಬಹುಗುಣ ,ಡಿ ಆರ್ ಎಫ್ ಓ ವಸಂತ್ ಕುಮಾರ್, ಅರಣ್ಯ ಸಂರಕ್ಷಕ ರಾಜೇಶ್,ಇದ್ದರು

Namma Challakere Local News
error: Content is protected !!