ಚಳ್ಳಕೆರೆ : ಕೊನಿಗರಹಳ್ಳಿ ಮತ್ತು ತೊರೆಬಿರನಹಳ್ಳಿ ಗ್ರಾಮಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯಕ್ಕೊಳಗಾದ ಕುಟುಂಬಗಳಿಗೆ ತಕ್ಷಣವೇ ನಿವೇಶನವನ್ನು ಅಭಿವೃದ್ಧಿಪಡಿಸಿ ಪರಿಪೂರ್ಣವಾದ ಫಲಾನುಭವಿಗಳ ಆಯ್ಕೆಯನ್ನು ಮಾಡಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಅಗತ್ಯ ಸೌಕರ್ಯವನ್ನು ತಕ್ಷಣವೇ ಕಲ್ಪಿಸಲು ಕ್ರಮವಹಿಸಬೇಕೆಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ತಹಶೀಲ್ದಾರ್ ಎನ್. ರಘುಮೂರ್ತಿ ಸೂಚಿಸಿದ್ದಾರೆ.
ಇಂದು ಅವರು ಪರಶುರಾಂಪುರ ಹೋಬಳಿಯ ಕೊನಿಗರಹಳ್ಳಿ ಮತ್ತು ದೊಡ್ಡಬೀರನಹಳ್ಳಿ ಗ್ರಾಮಕ್ಕೆ ಭೇಟಿ ದೌರ್ಜನ್ಯ ಕುಟುಂಬಗಳಿಗೆ ಮೀಸಲಿಟ್ಟಿರುವ ನಿವೇಶನಗಳನ್ನು ತಾಲೂಕು ಸರ್ವೆ ಅಧಿಕಾರಿಗಳ ಮುಖಾಂತರ ಅಳತೆ ಮಾಡಿಸಿ, ನಂತರ ಮಾತನಾಡಿದ ಅವರು 2015- 16 ರ ದೌರ್ಜನ್ಯ ಪ್ರಕರಣ ಇದಾಗಿದ್ದು ಈ ಫಲಾನುಭವಿಗಳಿಗೆ ತಕ್ಷಣವೇ ನಿವೇಶನ ಮತ್ತುವಸತಿ ವ್ಯವಸ್ಥೆ ವೈಜ್ಞಾನಿಕವಾಗಿ ಕಲ್ಪಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಸೂಚಿಸಿದ್ದು
ಇವರುಗಳಿಗೆ ಸೌಲಭ್ಯ ಕಲ್ಪಿಸಲು ಕಂದಾಯ ಇಲಾಖೆಯಿಂದ ಈ ಭೂಮಿಯನ್ನು ಕಾರ್ಯನಿರ್ವಹಣಾಧಿಕಾರಿಗಳಿಗೆ ಹಸ್ತಾಂತರಿಸಿ ನಾಲ್ಕೈದು ವರ್ಷ ಕಳೆದರೂ ನಿವೇಶನವನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಕಾರ್ಯನಿರ್ವಹಣಾಧಿಕಾರಿಗಳು ಮುಂದಾಗಿಲ್ಲ ಈ ದಲಿತ ಕುಟುಂಬದವರು ದಿನಂ ಪ್ರತಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿರುವ ವಿಷಾದನೀಯ ಸಂಗತಿ ತಕ್ಷಣವೇ ಪಂಚಾಯತಿ ವ್ಯವಸ್ಥೆಯಲ್ಲಿ ಅಥವಾ ಇಂಜಿನಿಯರಿಂಗ್ ಇಲಾಖೆ ಸುಪರ್ದಿನಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಫಲಾನುಭವಿಗಳಿಗೆ ಹಸ್ತಾಂತರಿಸ ಬೇಕೆಂದು ತಾಕೀತು ಮಾಡಿದರು
ಈ ಸಂದರ್ಭದಲ್ಲಿ ಸಂತೋಷ್ ಸಹಾಯಕ ನಿರ್ದೇಶಕರು ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಾವ್ಯ , ರಾಜಸ್ವನಿರೀಕ್ಷಕ ಮೋಹನ್, ತಾಲೂಕು ಸರ್ವೆ ಪ್ರಸನ್ನಕುಮಾರ್ , ಗ್ರಾಮ ಲೆಕ್ಕಾಧಿಕಾರಿ ಹಿರಿಯಣ್ಣ ಹಾಗೂ ಕೊನಿಗರಹಳ್ಳಿ, ದೊಡ್ಡ ಬೀರನಹಳ್ಳಿ ಗ್ರಾಮದ ಫಲಾನುಭವಿಗಳು ಉಪಸ್ಥಿತರಿದ್ದರು