ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ
ಪ್ರಕಟವಾಗಿದ್ದು, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಫಲಿತಾಂಶ
ಪ್ರಕಟಿಸಿದ್ದಾರೆ. ಈ ಬಾರಿ 85.63% ರಷ್ಟು ಫಲಿತಾಂಶ
ಬಂದಿದೆ. ಈ ವರ್ಷವೂ ಹೆಣ್ಣು ಮಕ್ಕಳೇ ಮೇಲುಗೈ
ಸಾಧಿಸಿದ್ದಾರೆ. ನಗರಕ್ಕಿಂತ ಗ್ರಾಮೀಣ ಮಕ್ಕಳೇ ಮೇಲುಗೈ
ಸಾಧಿಸಿರಿವುದು ಸಾಬೀತಾಗಿದೆ.
ರಾಜ್ಯದ ಒಟ್ಟು 15,387 ಶಾಲೆಗಳ 8,53,436 ಲಕ್ಷ
ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 8,73,884
ವಿಧ್ಯಾರ್ಥಿಗಳಲ್ಲಿ 7,30,881 ಲಕ್ಷ ವಿಧ್ಯಾರ್ಥಿಗಳು
ಉತ್ತೀರ್ಣರಾಗಿದ್ದಾರೆ. 3,72,279 ಲಕ್ಷ ಹೆಣ್ಣು ಮಕ್ಕಳು,
(ಶೇ.90.02) ಉತ್ತೀರ್ಣರಾಗಿದ್ದು, 3,58,602 ಲಕ್ಷ ಗಂಡು
ಮಕ್ಕಳು (ಶೇ.81.03) ಉತ್ತೀರ್ಣರಾಗಿದ್ದಾರೆ. 40,061
ಮಕ್ಕಳು ಗ್ರೇಸ್ ಮಾರ್ಕ್ಸ್ ಪಡೆದು ಪಾಸ್ ಆಗಿದ್ದಾರೆ.
ಈ ವರ್ಷ ಜಿಲ್ಲೆಗಳಿಗೆ ಗ್ರೇಡ್ ವೈಸ್ ಸ್ಥಾನ ನೀಡಿದ್ದು, 32
ಜಿಲ್ಲೆಗಳು A ಗ್ರೇಡ್ ನೀಡಿದೆ. 145 ವಿದ್ಯಾರ್ಥಿಗಳಿಗೆ
625ಕ್ಕೆ 625 ಅಂಕಗಳಿಸಿದ್ದಾರೆ.
ಸರ್ಕಾರಿ ಶಾಲೆಯ 21
ಮಕ್ಕಳಿಗೆ 625ಕ್ಕೆ 625 ಅಂಕ ಪಡೆದಿದ್ದಾರೆ. ತುಮಕೂರಿನ
ಚಿಕ್ಕನಾಯಕನಹಳ್ಳಿಯ ಭೂಮಿಕಾ 625ಕ್ಕೆ 625
ಅಂಕಗಳಿಸಿದ್ದಾರೆ.