ಚಳ್ಳಕೆರೆ : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು ಇಂದು ತಾಲೂಕಿನಲ್ಲಿ ವಾಸವಿ ಆಂಗ್ಲ ಮಾಧ್ಯಮ ಶಾಲೆಯ ಭಾವನ್ ಕುಮಾರ್ ಎಂಬ ವಿದ್ಯಾರ್ಥಿ 625ಕ್ಕೆ 625ಅಂಕಗಳಿಸುವ ಮೂಲಕ ತಾಲೂಕಿಗೆ ಪ್ರಥಮವಾಗಿದ್ದಾನೆ,
ತಾಲೂಕಿನಲ್ಲಿ ಒಟ್ಟು ಫಲಿತಾಂಶ 96ರಷ್ಟು ಹೇರಿಕೆ ಕಂಡಿದ್ದು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ, ತಾಲೂಕಿನಲ್ಲಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ 5091, ಉತ್ತೀರ್ಣರಾದ ವಿದ್ಯಾರ್ಥಿಗಳು 4938, ಅನುತ್ತಿರ್ಣರಾದ ವಿದ್ಯಾರ್ಥಿಗಳು 153 ಅಂಕಿ ಅಂಶವಿದೆ, ಒಟ್ಟಾರೆ ಈ ಬಾರಿ ಉತ್ತಮ ಫಲಿತಾಂಶ ಹೊರಬಿದ್ದಿದೆ ಎನ್ನಲಾಗಿದೆ.
ತಾಲೂಕಿನಲ್ಲಿ ವಾಸವಿ ಆಂಗ್ಲ ಮಾಧ್ಯಮ ಪ್ರೌಡಶಾಲೆಯ ಭಾವನ್ ಕುಮಾರ್, 625 ಕ್ಕೆ 625 ಹಾಗೂ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪೂಜಿತ 625ಕ್ಕೆ 624 ಅಂಕ, ವಾಸವಿಆಂಗ್ಲ ಮಾಧ್ಯಮ ಶಾಲೆಯ ಪಿ.ನಂದನ್ 624 ಅಂಕ, ನಾಯಕನಹಟ್ಟಿ ವಿದ್ಯಾವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಎಂ.ಎಂ.ಪೂರ್ವ 624 ಅಂಕ, ಕುವೆಂಪು ಆಂಗ್ಲ ಮಾಧ್ಯಮ ಪ್ರೌಡಶಾಲೆಯ ಮಾನಸ ಗಂಗಾ 623 ಅಂಕ ಗಳಿಸುವ ಮೂಲಕ ತಾಲೂಕಿಗೆ ಪ್ರಥಮ ವಾಗಿದ್ದಾರೆ ಎಂದು ಕ್ಷೇತ್ರ ಶೀಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದ್ದಾರೆ.
ಇನ್ನೂ 625 ಕ್ಕೆ 625ಅಂಕ ಗಳಿಸಿದ ವಾಸವಿ ಆಂಗ್ಲ ಮಾಧ್ಯಮ ಶಾಲೆಯ ಭಾವನ್ ಕುಮಾರ್ ತಂದೆ ಕಿರಾಣಿ ಅಂಗಡಿ ನಡೆಸುತ್ತಿದ್ದು ಮಗನ ವ್ಯಾಸಂಗದ ಕನಸು ಕಂಡ ತಂದೆ ತಾಯಿಗೆ ನಿರೀಕ್ಷೆ ಮೀರಿ ಫಲಿತಾಂಶ ಬಂದಿರುವುದರಿಂದ ಹರ್ಷ ವ್ಯಕ್ತಪಡಿಸಿದ್ದಾರೆ.