ಚಳ್ಳಕೆರೆ : ಚಂದ್ರನ ಮೇಲೆ ಇಳಿದ ಮೊದಲ ಮಾನವ*
ಜುಲೈ 20, 1969 ರಂದು ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ
ಮೊದಲ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರನಾದವನು ನೀಲ್ ಆರ್ಮ್
ಸ್ಟಾಂಗ್. ಚಂದ್ರನ ಮೇಲೆ ಪಾದಾರ್ಪಣೆ ಮಾಡಿ ಇಲ್ಲಿಗೆ 55 ವರ್ಷಗಳೇ
ಕಳೆದಿವೆ.
ಆರ್ಮ್ ಸ್ಟ್ಯಾಂಗ್ ವಿಮಾನಯಾನಿಯಾಗಿದ್ದ. ಕೊರಿಯಾ ವಿರುದ್ಧ
78 ಮಿಷನ್ ವಿಮಾನಗಳನ್ನು ಹಾರಿಸಿದ್ದ ನಂತರ ಗಗನಯಾತ್ರಿಗಳ
ತಂಡಕ್ಕೆ ಪೈಲಟ್ ಆಗಿ ಆಯ್ಕೆಯಾಗಿ, 1969 ರಲ್ಲಿ ಅಪೋಲೋ ||
ಗಗನನೌಕೆಯ ಕಮಾಂಡರ್ ಆಗಿ ನೇಮಕಗೊಂಡು,
ಸಹಯಾತ್ರಿಗಳಾಗಿ
ಮೈಕಲ್ ಕಾಲಿನ್ಸ್ ಮತ್ತು ಬಜ್ ಆಲ್ವಿನ್ ಜೊತೆಗೂಡಿ ಬಾಹ್ಯಾಕಾಶಕ್ಕೆ
ಹಾರಿದ. ಆದರೆ ಚಂದ್ರನ ನೆಲದ ಮೇಲೆ ಮೊದಲು ಕಾಲಿಟ್ಟವನು ನೀಲ್
ಆರ್ಮ್ ಸ್ಟಾಂಗ್. ಆರ್ಮ್ ಸ್ಟ್ರಾಂಗ್
ಇದು ಮನುಷ್ಯನು ಇಟ್ಟ ಮೊದಲ ಹೆಜ್ಜೆ ಆಗಿರಬಹುದು. ಆದರೆ ಇದು ಮನುಕುಲಕ್ಕೆ ದೊಡ್ಡ ಹೆಜ್ಜೆ ನೀಲ್ ಆರ್ಮ್ ಸ್ಟ್ಯಾಂಗ್ ಚಂದ್ರನಿಂದ ಕಲ್ಲು
ಖನಿಜ ಮತ್ತು ಮಣ್ಣನ್ನು ತಂದು ನಾಸಾದ ಪ್ರಯೋಗಶಾಲೆಯಲ್ಲಿ
ಇಟ್ಟಿದ್ದಾನೆ. ಒಟ್ಟಿನಲ್ಲಿ ಚಂದ್ರನ ಮೇಲೆ ಇಳಿದು, ಅಮೆರಿಕಾದ ಧ್ವಜವನ್ನು
ನೆಟ್ಟು ನಡೆದಾಡಿದ ಮೊದಲ ಮಾನವ. ನೀಲ್ ಆರ್ಮ್ ಸ್ಟ್ಯಾಂಗ್ 2012 ರ
25 ಆಗಸ್ಟ್ ತಿಂಗಳಲ್ಲಿ ತನ್ನ 82 ನೇ ವಯಸ್ಸಿನಲ್ಲಿ ನಿಧನರಾದರು ಎಂದು
ಚಿತ್ರದುರ್ಗದ ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ತಿಳಿಸಿದ್ದಾರೆ