ಚಳ್ಳಕೆರೆ : ಕನ್ನಡಿಗರ ಉದ್ಯೋಗ ಮೀಸಲು ವಿರೋಧಿಸಿರುವ ಸಂಪುಟ ಸಚಿವರನ್ನು ಕೂಡಲೇ
ಸಂಪುಟದಿಂದ ಕೈ ಬಿಡಬೇಕು.
ಕನ್ನಡ ನಾಡಿನ ವಿರೋಧಿತನದ
ಅವಕಾಶವನ್ನು ತಡೆಹಿಡಿಯಬೇಕು ಎಂದು ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿ ಆಕ್ರೋಶ ಹೊರ ಹಾಕಿದರು.

ಅವರು ನಗರದ ತಾಲ್ಲೂಕು ಕಚೇರಿಯಲ್ಲಿ ಶಿರಸ್ತೆದಾರಗೆ ಮನವಿ ಸಲ್ಲಿಸಿ ಮಾತನಾಡಿದ ಸಾಹಿತಿ, ಹೊರಾಟಗಾರ , ಪರ್ತಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ,

ನಾಡಿನ ಜನರು ಕಟ್ಟುವ ತೆರಿಗೆ ಹಣದಲ್ಲಿ ಸೌಲಭ್ಯಗಳನ್ನು ಬಳಸಿಕೊಂಡು ಸ್ಥಾಪಿಸುವ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವುದು ಕಡ್ಡಾಯವಾಗಬೇಕು.

ಸಾಮಾಜಿಕ ನ್ಯಾಯ ಆಡಳಿತದಲ್ಲಿ ಹೆಸರು ಪಡೆದಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯರವರು
ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ವಿಶ್ವಾಸ ಪಡೆದು ಕನ್ನಡಿಗರ ಉದ್ಯೋಗ
ಮೀಸಲು ಮಸುದೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಇನ್ನೂ ಪರ್ತಕರ್ತ ಮೈತ್ರಿ ದ್ಯಾಮಯ್ಯ ಮಾತನಾಡಿ, ರಾಜ್ಯದಲ್ಲಿ ಸ್ಥಾಪನೆ,ಮಾಡುವ ಕಂಪನಿಗಳನ್ನು ನಿಯಂತ್ರಣ ಮಾಡಬೇಕು.
ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ
ದೂರಮಾಡಬೇಕು.
ಖಾಸಗಿ ಕಂಪನಿಗಳಿಗೆ ಸ್ಥಳೀಯ ಕಾನೂನುಗಳ
ಪ್ರಾದೇಶಿಕತೆಗೆ ರಕ್ಷಣೆ ಸಿಗುತ್ತಿಲ್ಲ ಎನ್ನುವುದನ್ನು
ಚಳ್ಳಕೆರೆ ತಾಲೂಕಿನಲ್ಲಿ ಸ್ಥಾಪಿತವಾಗಿರುವ ಡಿಆರ್ ಡಿ ಒ ಸಂಸ್ಥೆಯಲ್ಲಿ ಸ್ಥಳೀಯರಿಗೆ
ಉದ್ಯೋಗ ಸಿಗಬೇಕು. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದು ನಿಲ್ಲಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂಧರ್ಭದಲ್ಲಿ ಕನ್ನಡಪರ ಸಂಘಟನೆಯ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ, ಹೆಚ್.ಎಸ್.ಸೈಯದ್, ಎಲ್ ಎಸ್ ಪಾಂಡು, ವೀರೇಂದ್ರ, ಬಸವರಾಜ್, ಬಿ.ಮೂರ್ತಿ, ಇತರರು ಇದ್ದರು.

About The Author

Namma Challakere Local News
error: Content is protected !!