ಚಳ್ಳಕೆರೆ : ಈಡೀ ಜಿಲ್ಲೆಯಲ್ಲಿ ಅತೀ ಹೆಚ್ಚಿನದಾಗಿ ಚಳ್ಳಕೆರೆ ತಾಲೂಕಿನ ರೈತರಿಗೆ ಶೇಕಡಾ50 ರಷ್ಟು ಬೆಳೆ ಬಂದಿದೆ, ಆದ್ದರಿಂದ ಈ ಬಾರಿಯೂ ಪಾರದರ್ಶಕ ಬೆಳೆವಿಮೆ ಕಟಾವಿಗೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಾಪಂ ಆಡಳಿತ ಅಧಿಕಾರಿ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಸಾಂಖ್ಯಿಕ ಕಚೇರಿ ಜಿಲ್ಲಾಡಳಿತ ವತಿಯಿಂದ ಕಂದಾಯ ಇಲಾಖೆ .ಕೃಷಿ ಹಾಗೂ
ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಆಯೋಜಿಸಿದ್ದ 2024-25 ನೇ
ಸಾಲಿನ ಬೆಳೆ ಕಟಾವು ಸಮೀಕ್ಷೆ ಕಾರ್ಯಗಾರ ತರಬೇತಿ ಕಾರ್ಯಕಲ್ಲಿ
ಭಾಗವಹಿಸಿ ಮಾತನಾಡಿದರು.
2016 ರಿಂದ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ ಜಾರಿಯಾಗಿದ್ದು
ಬೆಳೆ ಕಟಾವು ಸಮೀಕ್ಷೆಯನ್ನು ವಿಮಾ
ಕಂಪನಿಯೂ ಒಳಗೊಂಡು ಕಂದಾಯ, ಕೃಷಿ, ತೋಟಗಾರಿಕೆ, ಸಾಂಖಿಕ ಇಲಾಖೆಗಳು ಒಟ್ಟಾಗಿ ಈ ಕಾರ್ಯವನ್ನು ಕೈಗೊಳ್ಳುತ್ತವೆ. ಹಿಂಗಾರು
ಮುಂಗಾರು ಬೆಳೆ ಕಟಾವು ಮೂಲಕ ಬೆಳೆ ಪ್ರಮಾಣವನ್ನು
ನಿರ್ಧರಿಸಲಾಗುತ್ತದೆ.
ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರ್ಯಾಂಡಮ್
ರೀತಿಯಲ್ಲಿ ಬೆಳೆ ಪಾರದರ್ಶಕವಾಗಿ ಲೆಕ್ಕಾಚಾರ ಮಾಡಲಾಗುತ್ತದೆ.
ವಿವಿಧ ಇಲಾಖೆಗಳಲ್ಲಿ ಬೆಳೆ ಇಳುವರಿ ಉತ್ಪಾದನೆ ಮಾಡುವ ಉದ್ದೇಶ.
ನಮ್ಮ ದೇಶದ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ
ಮಾಡುವ ಉದ್ದೇಶದಿಂದ ರೈತನ ಆರ್ಥಿಕ ನಷ್ಟ ತುಂಬಲು ಬೆಳೆ ವಿಮೆ
ಯೋಜನೆ ಜಾರಿಗೊಳಿಸಲಾಗಿದೆ.
ನಾವು ಕುಳಿತಲ್ಲೇ ಮೊಬೈಲ್ ನಲ್ಲೇ
ಸುರಕ್ಷಾ ಆಫ್ ಮೂಲಕ ಬೆಳೆ ಸಮೀಕ್ಷೆ ಕಟಾವು ಮಾಹಿತಿ ನೋಡಲು
ಅವಕಾಶ ಇದೆ ಬೆಳೆ ಕಟಾವ್ ಲೋಪದೋಷಗಳನ್ನು ನೋಡಲು
ಅವಕಾಶ ಇದೆ 83,500 ರೈತರು ಬೆಳೆ ವಿಮೆ ಕಂಟ್ಟಿದ್ದರು. ತಾಲೂಕಿಗೆ 139
ಕೋಟಿ ಬೆಳೆ ವಿಮೆ ಬಿಡುಗಡೆಯಾಗಿದೆ ಮಳೆ ಕಡಿಮೆ ಬೀಳುವ ಪ್ರದೇಶ
ವಾಗಿರುವುದರಿಂದ ಬೆಳೆ ವೈಪಲ್ಯ ಕಂಡು ಬರುತ್ತದೆ ಬೆಳೆ ವಿಮೆ ವರದಾನ
ವಾಗಿದೆ.
ಇನ್ನೂ ತಹಶಿಲ್ದಾರ್ ರೇಹಾನ್ ಪಾಷ ಮಾತನಾಡಿ, ಬೆಳೆ ವಿಮೆ ಕಟಾವಿಗೆ ಅಧಿಕಾರಿಗಳ ಪಾರದರ್ಶಕತೆ ಯಿಂದ ಮಾಡಬೇಕು ನೀವು ಮಾಡುವ ಸಣ್ಣ ತಪ್ಪುನಿಂದ ರೈತನು ಬೆಳೆವಿಮೆಯಿಂದ ವಂಚಿತನಾಗುತ್ತಾನೆ, ಆದ್ದರಿಂದ
ಬೆಳೆ ಕಟಾವ್ ಸಮೀಕ್ಷೆ ಮಾಡುವಾಗ ರೈತರಿಗೆ ಬರಗಾಲ ಬಡತನ ಇರುವ ಪ್ರದೇಶವಾಗಿದ್ದು ರೈತರಿಗೆ ನಷ್ಟವಾಗದ ರೀತಿಯಲ್ಲಿ ಬೆಳೆ ಹಾಗೂ ಬೆಳೆಸಮೀಕ್ಷೆ ಮಾಡ ಬೇಕಿದೆ ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನವಿರ ಬೇಕು ಬೆಳೆಯ ಇಳುವರಿ ನಿಖರಮಾಹಿತಿ ದಾಖಲಿಸ ಬೇಕು
ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ತಾಪಂ ಆಡಳಿತ ಅಧಿಕಾರಿ ಮಂಜುನಾಥ್, ತಹಶಿಲ್ದಾರ್ ರೇಹಾನ್ ಪಾಷ, ತಾಪಂ ಇಓ ಶಶಿಧರ್, ಜಿಲ್ಲಾ ಸಂಖ್ಯಾ ಸಂಗ್ರಣಾಧಿಕಾರಿ ರವಿಕುಮಾರ್, ಕೃಷಿ ಉಪ ನಿರ್ದೇಶಕ ಪ್ರಭಾಕರ್, ಸಹಾಯಕ ಕೃಷಿ ನಿರ್ದೇಶಕ ಆರ್.ಅಶೋಕ, ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ಶಶಿರೇಖಾ, ತಾಪಂ ಸಹಾಯಕ ನಿರ್ದೇಶಕ ಸಂತೋಷ, ಸಂಪತ್ ಕುಮಾರ್, ಅಧೀಕ್ಷಕ ಕೆಂಚಪ್ಪ, ವೀಣಾ, ಚಂದ್ರಮ್ಮ, ಅಶ್ವತ್ಥಾಮ, ಇತರರು ಇದ್ದರು.