ಚಳ್ಳಕೆರೆ :
ಶಾಲೆ ಬೀಗ ಮುರಿದು ಮದ್ಯಪಾನ ಮಾಡಿದ ಪುಂಡರು
ಚಿತ್ರದುರ್ಗದ ಸೊಂಡಕೋಳ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ
ಪ್ರೌಢಶಾಲೆಯಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ.
ರಾತ್ರಿ ವೇಳೆಯಲ್ಲಿ
ಕೆಲಪುಂಡರು ಶಾಲೆಯ ಬೀಗ ಮುರಿದು ಒಳಗೆ ನುಗ್ಗಿ ಮದ್ಯಪಾನ
ಮಾಡಿ ಶಾಲೆಯ ಪೀಠೋಪಕರಣಗಳನ್ನು ಹಾಳು ಮಾಡಿದ್ದಾರೆ.
ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಗ್ರಾಮಸ್ಥರು
ಹಾಗೂ ಶಾಲೆಯ ಮುಖ್ಯಸ್ಥರು ರೋಸಿ ಹೋಗಿದ್ದು, ಪುಂಡರ ಮೇಲೆ
ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.