ಚಳ್ಳಕೆರೆ :
ಐಮಂಗಲ ಪೊಲೀಸ್ ತರಬೇತಿ ಶಾಲೆಯಲ್ಲಿ ಕರಾಟೆ
ತರಬೇತಿ ಶಿಬಿರ
ಹಿರಿಯೂರು ತಾಲೂಕಿನ ಐಮಂಗಲ ಪೊಲೀಸ್ ತರಬೇತಿ
ಶಾಲೆಯಲ್ಲಿ, ಹಿರಿಯೂರಿನ ಕರಾಟೆ ಗುರುಗಳಾದ ಸಾನ್ ಸೂಯ್
ಕೆ ರಂಗಸ್ವಾಮಿ, ನೇತೃತ್ವದಲ್ಲಿ ಪೋಲಿಸ್ ತರಬೇತಿ ಪಡೆಯಲಿರುವ
ಸಿಬ್ಬಂದಿಗೆ ಸುಮಾರು 10 ದಿನಗಳ ಕಾಲ ಏರ್ಪಡಿಸಿರುವ ಆತ್ಮ
ರಕ್ಷಣಾ, ಸುರಕ್ಷಣಾ ಕರಾಟೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ನೀಡಲಾಯಿತು.
ಐಮಂಗಲ ಪೊಲೀಸ್ ತರಬೇತಿ ಶಾಲೆಯ
ಡಿವೈಎಸ್ಪಿ ಪರಶುರಾಮ್, ಆರ್ ಎಸ್ ಐ ಮಂಜುನಾಥ್
ಬಿದರಿಕೊಪ್ಪ ಮತ್ತು ಕೆ ಆರ್ ಮಂಜುನಾಥ್ ಮತ್ತಿತರರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.