ಚಳ್ಳಕೆರೆ :
ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸದೇ
ಇರುವುದು ಖಂಡನೀಯ
ಚಳುವಳಿ ಪ್ರಾರಂಭವಾಗಿ 30 ದಿನ ಕಳೆದರೂ ಜಿಲ್ಲಾ
ಆಡಳಿತವಾಗಲಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಲಿ ಧರಣಿ
ಸ್ಥಳಕ್ಕೆ ಬಂದು, ರೈತರ ಬೇಡಿಕೆ ಬಗ್ಗೆ ಗಮನ ಹರಿಸದೆ ಇರುವುದು
ನಿಜಕ್ಕೂ ಖಂಡನೀಯ ಎಂದು ರೈತ ಸಂಘದ ಅಧ್ಯಕ್ಷರಾದ ಕೆ.
ಟಿ. ತಿಪ್ಪೇಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯೂರಿನ
ಜವನಗೊಂಡನಹಳ್ಳಿ ಹೋಬಳಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು
ಒತ್ತಾಯಿಸಿ, ನಡೆಸುತ್ತಿರುವ ಧರಣಿ ಸ್ಥಳದಿಂದ ಗ್ರಾಪಂ ವರೆಗಿನ
ಉರುಳು ಸೇವೆಯಲ್ಲಿ ಪಾಲ್ಗೊಂಡು ಮಾತಾಡಿದರು.