ಚಳ್ಳಕೆರೆ : ಮುಂಜಾನೆ 5 ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತರೆ ಮಾತ್ರ , ಪಡಿತರ ಅಕ್ಕಿ ಇಲ್ಲವಾದರೆ ಖಾಲಿಯಾಗಿದೆ ಎಂಬ ಉತ್ತರ
ಈಗಾದರೆ ಪಡಿತರ ಅಕ್ಕಿ ಕಾಳ ಸಂತೆಗೆ ಮರಾಟವಾಗಬಹುದೇ..?
ಹೌದು ಚಳ್ಳಕೆರೆ ತಾಲೂಕಿನ ಹಲವು ಪಡಿತರ ಅಕ್ಕಿ ವಿತರಿಸುವ ನ್ಯಾಯಬೆಲೆ ಅಂಗಡಿ ಮಾಲೀಕರ ಉತ್ತರ ಇದಾಗಿದೆ.
ಅದರಂತೆ ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯಲ್ಲಿ ಇರುವ ಅಂಬೇಡ್ಕರ್ ನಗರದ ಪಡಿತರ ಅಕ್ಕಿ ವಿತರಣೆ ಮಾಡುವ ನ್ಯಾಯಬೆಲೆ ಅಂಗಡಿಯಲ್ಲಿ ತಿಂಗಳಿಗೆ ಕೇವಲ ಎರಡರಿಂದ ಮೂರು ದಿನಗಳು ಮಾತ್ರ ಅಕ್ಕಿ ವಿತರಣೆ ನಂತರ ಬಂದರೆ ಅಕ್ಕಿ ಖಾಲಿಯಾಗಿದೆ ಎಂಬ ಮಾಲೀಕರ ಉತ್ತರ ನೀಡುತ್ತಾರೆ ಎಂದು ಸ್ಥಳೀಯರ ಆರೋಪವಾಗಿದೆ.
ಪ್ರತಿ ತಿಂಗಳು 10 ರಿಂದ 30 ನೇ ದಿನದ ವರೆಗೆ ಪಡಿತರ ಸರಬರಾಜು ಮಾಡುವ ನಿಯಮವಿದೆ, ಆದರೆ ಸುಖಾಸುಮ್ಮನೆ ಬಡವರು ಮುಂಜಾನೆಯಿಂದ ಸರಥಿ ಸಾಲಿನಲ್ಲಿ ಅನ್ನಭಾಗ್ಯದ ಅಕ್ಕಿಗಾಗಿ ಕೂಲಿ ಬಿಟ್ಟು ಕಾಯುವ ಪರಸ್ಥತಿ ನಿರ್ಮಾಣವಾಗಿದೆ.
ಬಡವರ ಹೊಟ್ಟೆ ತುಂಬಿಸುವ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರ ಹಿನ್ನಿಲದ ಕಸರತ್ತು ನಡೆಸಿ ಹೊರ ದೇಶಗಳಿಂದ, ಹೊರ ರಾಜ್ಯಗಳಿಂದ ರಾಜ್ಯದ ಬಡ ಜನರಿಗೆ ಅಸಿವು ನೀಗಿಸುವ ಸಲುವಾಗಿ ನೀಡುವ ಅನ್ನಭಾಗ್ಯ ಯೋಜನೆ ಹಳ್ಳಹಿಡಿಯುವ ಕೆಲವು ಇಂತಹ ಘಟನೆಗಳಿಂದ ರಾಜ್ಯ ಸರ್ಕಾರಕ್ಕೆ ಕಳಂಕ ತರುವ ನಿಟ್ಟಿನಲ್ಲಿ ನಡೆಯುತ್ತಿದೆ.
ಆದರೆ ಇಲ್ಲಿನ ಆಹಾರ ನೀರೀಕ್ಷ ಅಧಿಕಾರಿಗಳ ಮಾತ್ರ ನಿದ್ದೆ ಮಂಪರಿನಿಂದ ಕಂಡರು ಕಾಣದಂತೆ ಇದ್ದಾರೆ
ಇನ್ನೂ ಚಳ್ಳಕೆರೆ ಮಾರ್ಗ ವಾಗಿ ಸುಮಾರು ಪಡಿತರ ಅಕ್ಕಿ ತುಂಬಿದ ಲಾರಿಗಳು ಕಾಳ ಸಂತೆಯಲ್ಲಿ ಸರಬರಾಜು ಹಾಗುವ ಅನುಮಾನವನ್ನು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.
ಇನ್ನೂ ಹಸಿವು ಮುಕ್ತ ಕರ್ನಾಟಕವನ್ನು ಮಾಡಲು ರಾಜ್ಯದ ಘನ ಸರಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರತಿಯೊಬ್ಬ ವ್ಯಕ್ತಿಗೂ ತಲಾ 10 ಕೆಜಿ ಅಕ್ಕಿ ನೀಡುವ ಮಹತ್ವ ಯೋಜನೆ ಗಟ್ಟಿಯಾಗಿದೆ.
ಇನ್ನೂ ಪೂರ್ಣ ಪ್ರಮಾಣದಲ್ಲಿ ಅಕ್ಕಿ ಸಿಗದೆ ಅದರ ವಂತಿಕೆ ಹಣವನ್ನು ಪ್ರತಿ ತಿಂಗಳು ಫಲಾನುಭವಿಗೆ ನೀಡುವ ಮೂಲಕ ಹಸಿವು ಮುಕ್ತ ಕರ್ನಾಟಕಕ್ಕೆ ಪಣ ತೊಟ್ಟ ರಾಜ್ಯ ಸರ್ಕಾರ ಇಂತಹ ಘಟನೆಗಳಿಂದ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಗಳಿವೆ.
ಜಿಲ್ಲೆಯಲ್ಲಿ ಎರಡನೇ ಅತೀ ದೊಡ್ಡ ತಾಲ್ಲೂಕು ಚಳ್ಳಕೆರೆ, ಸರಿ ಸುಮಾರು 122 ನ್ಯಾಯಬೆಲೆ ಅಂಗಡಿಗಳು ಒಳಗೊಂಡಿವೆ, ನಗರದಲ್ಲಿ 15 ನ್ಯಾಯ ಬೆಲೆ ಅಂಗಡಿಗಳು ಇವೆ ಈಗೇ ಬಯಲು ಸೀಮೆಯ ಜನರ ಹಸಿವು ನೀಗಿಸುವಲ್ಲಿ ಇಲ್ಲಿನ ಜನಪ್ರತಿನಿಧಿಗಳ ಹಿತಾಸಕ್ತಿ ಕೂಡ ಪ್ರತಿ ಜನ ಸಂಪರ್ಕ ಸಭೆ, ಕೆಡಿಪಿ ಸಭೆಗಳಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಕಟ್ಟುನಿಟ್ಟಿನ ಸೂಚನೆ ಕೂಡ ನೀಡುತ್ತಾರೆ ಆದರೆ ಇವು ಯಾವುದನ್ನು ಕ್ಯಾರೆ ಎನ್ನದ ಆಹಾರ ನೀರಿಕ್ಷಕ ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿರುವುದು ಕಂಡು ಬರುತ್ತದೆ.
ಕಳೆದ ದಿನಗಳಲ್ಲಿ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ಪಡಿತರ ಅಕ್ಕಿಗಾಗಿ ದಿನಗಟ್ಟಲೆ ಕಾಯುವ ಪರಿಸ್ಥಿತಿ ಎಂಬ ವರದಿಗಳು ಸದ್ದು ಮಾಡಿದವು ಆದರೆ ಇಂತಹ ಘಟನೆಗಳು ಅಧಿಕಾರಿಗಳ ವೈಪಲ್ಯದಿಂದ ನಡೆಯುತ್ತಲೇ ಇರುತ್ತಾವೆ,
ಆದರೆ ಇದರ ಬಗ್ಗೆ ಮೇಲಾಧಿಕಾರಿಗಳ ಕ್ರಮವೇನು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.