*ಸಮಯಕ್ಕೆ ಬಾರದ ಪಶು ವೈದ್ಯಾಧಿಕಾರಿಗಳು ಸಾಕು ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಲು ರೈತರು ಪರದಾಟ *
ಚಳ್ಳಕೆರೆ: ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದೆ ಇರುವುದರಿಂದ ರೈತರು ತಮ್ಮ ಸಾಕು ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸಲು ಪರದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ರೈತರು ಆರೋಪಿಸಿದ್ದಾರೆ .
ಪಶು ಚಿಕಿತ್ಸಾ ಕೇಂದ್ರದ ಮುಂಭಾಗದಲ್ಲಿ ವೈದ್ಯಾಧಿಕಾರಿಗಳು ಕರ್ತವ್ಯಕ್ಕೆ ಬರುವ ಸಮಯ ಬೆಳಗ್ಗೆ 9:00 ರಿಂದ 1:00 ವರೆಗೆ ಹಾಗೂ ಮಧ್ಯಾಹ್ನ ಊಟದ ನಂತರ ಮೂರರಿಂದ ಐದರವರೆಗೆ ಕರ್ತವ್ಯ ನಿರ್ವಹಿಸುವಂತೆ ನಾಮಫಲಕ ಹಾಕಿದ್ದರೂ ಸಹ ಸಮಯ 12 ಗಂಟೆಯಾದರೂ ವೈದ್ಯಾಧಿಕಾರಿಗಳು ಬಾರದೆ ಇರುವುದರಿಂದ ಹಲವು ರೈತರು ತಾವು ಸಾಕುವ ಪ್ರಾಣಿಗಳಾದ ಹಸು, ಧನ, ಎಮ್ಮೆ, ಕುರಿ, ಮೇಕೆ, ಇನ್ನು ಮುಂತಾದ ಪ್ರಾಣಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದು ಪ್ರಾಣಿಗಳನ್ನು ರಕ್ಷಿಸಿಕೊಳ್ಳಲು ಪಶು ಆಸ್ಪತ್ರೆಗೆ ಬಂದರೆ ಆಸ್ಪತ್ರೆಯೂ ಬೀಗ ಹಾಕಿರುವುದು ಕಂಡು ಬಂದಿದೆ.
ಹಲವು ದಿನಗಳಿಂದ ವೈದ್ಯಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ರೈತರ ಮಣಿಕಂಠ ಎಸ್, ಮಲ್ಲಿಕಾರ್ಜುನ್, ನಾಗರಾಜು, ಪ್ರದೀಪ್, ವೆಂಕಟೇಶ್, ಮೂರ್ತಿ ,ಆತ್ಮಲಿಂಗ, ಮಂಜುನಾಥ ,ಇನ್ನು ಮುಂತಾದ ರೈತರು ಆರೋಪಿಸಿದ್ದಾರೆ.
ಇದರಿಂದ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಪಶು ವೈದ್ಯಾಧಿಕಾರಿಯೂ ಸಮಯಕ್ಕೆ ಸರಿಯಾಗಿ ಹಾಜರಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.