ಚಳ್ಳಕೆರೆ : ಈಡೀ ರಾಜ್ಯಾದ್ಯಂತ ಉಲ್ಬಣಗೊಂಡಿರುವ ಡೆಂಗ್ಯೂ ವನ್ನು ಮಟ್ಟ ಹಾಕಲು ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದು ದೇವರೆಡ್ಡಿಹಳ್ಳಿ ಸಮುದಾಯ ಅರೋಗ್ಯಧಿಕಾರಿ ಎಂಎಸ್.ರಾಕೇಶ್ ಹೇಳಿದರು.
ಅವರು ತಾಲ್ಲೂಕಿನ ಘಟಪರ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನೂರು ಗ್ರಾಮದಲ್ಲಿ ದೇವರೆಡ್ಡಿಹಳ್ಳಿ ಆಯುಷ್ಮಾನ್ ಅರೋಗ್ಯ ಇಲಾಖೆ ವತಿಯಿಂದ ಹಾಗೂ ಸರಕಾರಿ ಶಾಲಾ ಮಕ್ಕಳ ಸಹಯೋಗದೊಂದಿಗೆ
ಡೆಂಗ್ಯೂ ಜಾಗೃತಿ ಅಭಿಯಾನದ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅರಿವು ಮೂಡಿಸಲಾಯಿತು.
ದೇವರೆಡ್ಡಿಹಳ್ಳಿ ಹಾಗೂ ಘಟಪರ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಡೆಂಗ್ಯೂ ಜಾಗೃತಿ ಜಾಗವನ್ನು ನಡೆಸಿ ಮಾತನಾಡಿದರು.
ಸಾರ್ವಜನಿಕರು ನಿಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಮೂಲಕ ಸೊಳ್ಳೆಗಳನ್ನು ನಿರ್ಮೂಲನೆ ಮಾಡಬೇಕು, ಎಲ್ಲೆಂದರಲ್ಲಿ ಕಸ ಬೀಸಾಡುವುದು, ನೀರು ನಿಲ್ಲುವಂತೆ ಮಾಡುವುದು ಮಾಡದೆ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಹಾಗೂ ನಮ್ಮ ಆರೋಗ್ಯವನ್ನು ಕಾಳಜಿಯಿಂದ ನೋಡಿಕೊಳ್ಳಬೇಕು ಎಂದರು.
ನಂತರ ಶಾಲಾ ಮಕ್ಕಳೊಂದಿಗೆ ಜಾಥಾ ಕಾರ್ಯಕ್ರಮ ಕೈಗೊಂಡು ಗ್ರಾಮಸ್ಥರಲ್ಲಿ ಡೆಂಗ್ಯೂ
ರೋಗ ಹರಡುವ ಪದ್ದತಿ, ಹಾಗೂ ರೋಗ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ತಿಳಿಸಲಾಯಿತು.
ಈ ಕಾರ್ಯಕ್ರಮದಲ್ಲಿ ದೇವರೆಡ್ಡಿಹಳ್ಳಿ ಸಮುದಾಯ ಅರೋಗ್ಯಧಿಕಾರಿ
ರಾಕೇಶ್ ಎಂ ಎಸ್, ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ತಿಪ್ಪೇಸ್ವಾಮಿ,
ಹಾಗೂ ಶಾಲೆಯ ಮುಖ್ಯ ಉಪಾಧ್ಯಾಯರು ಮತ್ತು ಸಹ ಶಿಕ್ಷಕರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು