ಚಳ್ಳಕೆರೆ :
ಈಗಾಗಲೇ 50 ಶಾಸಕರು ಅಸಮಾಧಾನಗೊಂಡಿದ್ದಾರೆ
ಅಪ್ಪಾಜಿನಾಡಗೌಡ ಹಾಗೂ ಇತರೇ ಶಾಸಕರು ಸರ್ಕಾರದ ಬಗ್ಗೆ
ಅಸಮಾಧಾನ ಹೊರ ಹಾಕಿದ್ದಾರೆ ಎಂದು ಚಿತ್ರದುರ್ಗ ಸಂಸದ
ಗೋವಿಂದ ಕಾರಜೋಳ ಹೇಳಿದರು.
ಅವರು ಚಿತ್ರದುರ್ಗದಲ್ಲಿ
ಮಾಧ್ಯಮಗಳೊಂದಿಗೆ ಮಾತಾಡಿದರು. ಸರ್ಕಾರ ಅಭಿವೃದ್ಧಿಗಾಗಿ
ಅನುದಾನ ಕೊಡುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ
ಕೊಡಲು ನಮ್ಮ ವಿರೋಧವಿಲ್ಲ, ಆದರೆ ಅಭಿವೃದ್ಧಿ ವಿಚಾರಕ್ಕೆ
ಅನುದಾನ ಕೊಡಬೇಕು.
ಗ್ಯಾರಂಟಿಗೆ ಬೇರೆ ಹಣ ಕೊಡಲಿ ಎಂದು
ಆಗ್ರಹಿಸಿದರು.