ಚಳ್ಳಕೆರೆ :ಚಳ್ಳಕೆರೆ ನಗರದ ಹೆಚ್.ಪಿ.ಪಿ.ಸಿ.ಪ್ರಥಮ ದರ್ಜೆ ಕಾಲೇಜು ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಐ.ಕ್ಯೂ.ಎ.ಸಿ. ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ. ಯುತ್ ರೆಡ್ ಕ್ರಾಸ್ ರೋವರ್ಸ್ ಘಟಕಗಳ ಸಮಾರೋಪ ಸಮಾರಂಭದ ಕಾರ್ಯಕ್ರಮ ಸಾವಿರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಕಾಲೇಜು ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಹಾಗೂ ಸ್ಥಳೀಯ ಶಾಸಕ ಟಿ ರಘುಮೂರ್ತಿ

ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳು ಹೆಚ್ಚಿರುವ ಈ ಕಾಲೇಜ್ ಕ್ಲಸ್ಟರ್ ವಿಶ್ವ ವಿದ್ಯಾಲಯಕ್ಕೆ ಪ್ರಯತ್ನ ಮಾಡಲಾಗುವುದು, ಇನ್ನೂ ಮಾದರಿ ಗ್ರಂಥಾಲಯ, ಸಭಾಂಗಣ, ಶುದ್ದ ಕುಡಿಯುವ ನೀರಿನ ಘಟಕ ಈಗೇ ಕಾಲೇಜ್ ಗೆ ಅವಶ್ಯಕವಾದ ಮೂಲ ಭೂತ ಸೌಲಭ್ಯಗಳನ್ನು ದೊರಕಿಸಲಾಗುವುದು, ಎಂದರು.

ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಮಂಜುನಾಥ್, ಕಾಲೇಜಿನ ಪ್ರೋಫೆಸರ್, ಸಿಬ್ಬಂದಿ ವರ್ಗದವರು, ನಗರಸಭೆ ಸದಸ್ಯೆ ಸುಮಾ, ಕವಿತಾ, ಸುಜಾತ ಪ್ರಹ್ಲಾದ್, ರಮೇಶ್ ಗೌಡ, ರಾಘವೇಂದ್ರ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!