ಚಳ್ಳಕೆರೆ :
ಶೀರ್ಷಿಕೆ:- “ಶ್ರೀವಿಷ್ಣು ಸಹಸ್ರನಾಮದ ಅರ್ಥ ವಿವೇಚನೆ ಅಗತ್ಯವಾದದ್ದು”-
ಪೂಜ್ಯ ಶ್ರೀ ವೈ ರಾಜಾರಾಮ್ ಸದ್ಗುರುಗಳು ಅಭಿಪ್ರಾಯ.
ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ಶ್ರೀ ವಾಸವಿ ದೇವಸ್ಥಾನದ ಗೀತಾ ಮಂದಿರದಲ್ಲಿ ಶ್ರೀ ವಾಸವಿ ವನಿತಾ ಸಂಘದಿಂದ “ಶ್ರೀವಿಷ್ಣು ಸಹಸ್ರನಾಮದ ಅರ್ಥ ವಿವೇಚನೆ “ಎಂಬ ವಿಷಯದ ಕುರಿತಾಗಿ ಆಯೋಜಿಸಿದ್ದ ಏಳು ದಿನಗಳ ಸಪ್ತಾಹ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು
ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಅದರ ಅರ್ಥ ವಿವೇಚನೆ ಮಾಡುವುದರಿಂದ ಮಹಾವಿಷ್ಣುವಿನ ಹಲವಾರು ಗಹನ ವಿಚಾರಗಳನ್ನು ತಿಳಿಯಬಹುದು.
ಅಲ್ಲದೆ ಇದರ ನಿತ್ಯ ಪಠಣದಿಂದ ನಮ್ಮ ಬದುಕಿನಲ್ಲಿ ಸುಖ,ಶಾಂತಿ,ನೆಮ್ಮದಿ ಕಾಣಲು ಸಾಧ್ಯ ಎಂದರು.
ನಂತರ ಮಾತನಾಡಿದ ಚಳ್ಳಕೆರೆಯ ಶ್ರೀ ಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ವಿಷ್ಣು ಸಹಸ್ರನಾಮದಲ್ಲಿ ಬರುವ “ಪುಷ್ಪಹಾಸಹ”ಎಂಬ ಶಬ್ದದ ಅರ್ಥ ವಿವರಣೆ ನೀಡಿ ಶ್ರೀ ವಿಷ್ಣು ಸಹಸ್ರನಾಮದ ನಿತ್ಯ ಅನುಸಂಧಾನದಿಂದ ನಾವು ನಿಜವಾದ ಆನಂದವನ್ನು ಪಡೆಯಬಹುದು,
ಅಲ್ಲದೇ ಮಹಾವಿಷ್ಣುವಿನಲ್ಲಿರುವ ಮಂದಹಾಸದಂತೆ ನಾವು ಸಹ ದಿನನಿತ್ಯದ ಬದುಕಿನಲ್ಲಿ ಸಾಧ್ಯವಾದಷ್ಟು ನಗುವುದನ್ನು ಕಲಿಯೋಣ ಎಂದು ನೆರೆದ ಸದ್ಭಕ್ತರಿಗೆ ಕಿವಿಮಾತು ಹೇಳಿದರು.
ಈ ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಭಕ್ತರಿಂದ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮದ ಪಾರಾಯಣ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಮಹಾಮಂಗಳಾರತಿ ಮತ್ತು ವಿಶೇಷ ಪ್ರಸಾದ ವಿನಿಯೋಗ ನಡೆಯಿತು.
ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಮತಿ ಕಲ್ಪನ ಮಧುಸೂದನ್,ನಳಿನ,ವಾಸವಿ,ಶ್ರೀಮತಿ ನಾಗವೇಣೆ ಪುರುಷೋತ್ತಮ, ಮಾಕಂ ಶ್ರೀನಿವಾಸಲು ಮಾಣಿಕ್ಯ ಸತ್ಯನಾರಾಯಣ, ಗೀತಾ ನಾಗರಾಜ್,ಉಷಾ, ಯತೀಶ್ ಎಂ.ಸಿದ್ದಾಪುರ, ಪಂಕಜ,ಡಾ,ಭೂಮಿಕಾ ವನಜಾಕ್ಷಮ್ಮ, ಸಂಧ್ಯಾ, ವಿದ್ಯಾ, ವೀಣಾಮಂಜುನಾಥ,ವಾಸವಿ ವನಿತಾ ಸಂಘದ ಸದಸ್ಯರು ಮತ್ತು ಶ್ರೀ ನರಹರಿ ಸದ್ಗುರು ಆಶ್ರಮ ಮತ್ತು ಶ್ರೀ ಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.