ಚಳ್ಳಕೆರೆ : ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರ್ಕಾರಿ ಆದೇಶ ಹೊರಡಿಸುವುದು ಹಾಗೂ ಇನ್ನೂ ಹಲವು ಬೇಡಿಕೆಗಳನ್ನೂ ಈಡೇಡಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲೂಕು ಘಟಕ ತಹಶೀಲ್ದಾರ್ ರೇಹಾನ್ ಪಾಷಗೆ ಮನವಿ ಸಲ್ಲಿಸಿದರು.
ತಾಲೂಕು ಕಛೇರಿಗೆ ದಾವಿಸಿದ ನೂರಾರು ನೌಕರ ವರ್ಗದವರು ತಹಶೀಲ್ದಾರ್ ಗೆ ಮನವಿ ಸಲ್ಲಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
6ನೇ ವೇತನ ಆಯೋಗವು ಜೂನ್ 1 ರಂದು 2017ರಲ್ಲಿ ರಚನೆಯಾಗಿ, ಜನವರಿ 2018ರಲ್ಲಿ ವರದಿ ಸಲ್ಲಿಸಿ ಸರ್ಕಾರವು ಸರ್ಕಾರಿ ಆದೇಶ ಹೊರಡಿಸಿ ಕೇವಲ 9 ತಿಂಗಳಲ್ಲೇ 6ನೇ ವೇತನ ಆಯೋಗ ಜಾರಿಗೊಳಿಸಲಾಗಿತ್ತು. ಸಂಪ್ರದಾಯದAತೆ ರಾಜ್ಯ 6ನೇ ವೇತನ ಆಯೋಗದ ವರದಿಯು ಅನುಷ್ಟಾನಗೊಂಡು 5 ವರ್ಷ ಪೂರ್ಣಗೊಂಡಿರುವುದರಿAದ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಈಗಾಗಲೇ ಪರಿಷ್ಕರಣೆಗೊಳಸಬೇಕು ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲೂಕು ಅಧ್ಯಕ್ಷ ಲಿಂಗೇಗೌಡ, ಗೌರವಾಧ್ಯಕ್ಷ ಎಸ್‌ಬಿ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಬಿ ವಿರಮೇಶ್, ಕೆ.ಬಸವರಾಜ್, ಸುರೇಶ್, ಸಿಟಿ.ವೀರೇಶ್, ಜಯಮ್ಮ ರುದ್ರಭೂಮಿ, ಮಂಜುನಾಥ್, ಇತರ ಅಧಿಕಾರಿ ವರ್ಗದವರು ನೌಕರರು ಪಾಲ್ಗೊಂಡಿದ್ದರು

Namma Challakere Local News
error: Content is protected !!