ನೆರೇಗಾ ಯೋಜನೆಯು ಸ್ಥಳೀಯ ಮಟ್ಟದಲ್ಲಿ ನಿರಂತರ ಉದ್ಯೋಗ ಕಲ್ಪಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ವರದಾನ ಕೊರಡಿಹಳ್ಳಿ ಯುವ ಮುಖಂಡ ಆನಂದಪ್ಪ.
ನಾಯಕನಹಟ್ಟಿ:: ನೆರೇಗಾ ಯೋಜನೆಯು ಸ್ಥಳೀಯ ಮಟ್ಟದಲ್ಲಿ ನಿರಂತರ ಉದ್ಯೋಗ ಕಲ್ಪಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ವರದಾನವಾಗಿದೆ ಎಂದು ಕೊರಡಿಹಳ್ಳಿ ಯುವ ಮುಖಂಡ ಆನಂದಪ್ಪ ಹೇಳಿದ್ದಾರೆ.
ಶುಕ್ರವಾರ ಸಮೀಪದ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಷ್ಟಲಗುಮ್ಮಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ನೂರಕ್ಕೂ ಹೆಚ್ಚು ಕೂಲಿಕಾರ್ಮಿಕರು ಕೆಲಸವನ್ನು ಮಾಡುತ್ತಿರುವ ಸ್ಥಳದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ನಮ್ಮ ನಾಯಕನಹಟ್ಟಿ ಹೋಬಳಿ ಈ ಭಾಗದಲ್ಲಿ ಅತಿ ಹೆಚ್ಚು ಕೂಲಿಕಾರ್ಮಿಕರು ರೈತರು ಇರುವುದರಿಂದ ಈ ಬಾರಿ ಮುಂಗಾರು ಮಳೆ ಕೊರತೆಯಿಂದಾಗಿ ಜನರು ಕಂಗಲಾಗಿದ್ದು ಕೆಲಸವಿಲ್ಲದೆ ದೂರದ ಪಟ್ಟಣ ನಗರ ಪ್ರದೇಶಗಳಿಗೆ ಕೆಲಸಕ್ಕಾಗಿ ಗೂಳಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಷ್ಟಲ ಭೂಮಿ ಚೌಳಕೆರೆ ಅಬ್ಬೇನಹಳ್ಳಿ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕೃಷಿ ಹೊಂಡ ಬದು ನಿರ್ಮಾಣ ತೋಟಗಾರಿಕೆ ಬೆಳೆ ರಾಜಕಾಲುವೆ ಕಾಮಗಾರಿಗಳಲ್ಲಿ ಗ್ರಾಮದ ಪುರುಷರು ಮಹಿಳೆಯರು ಕಳೆದ ಎರಡು ವಾರದಿಂದ ಕೆಲಸವನ್ನು ಮಾಡುತ್ತಿದ್ದು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ನೆರೇಗಾ ಯೋಜನೆ ವರದಾನವಾಗಿದೆ ತಮ್ಮ ಮಕ್ಕಳ ವಿದ್ಯಾಭ್ಯಾಸ ಮತ್ತು ವಿವಿಧ ಸಂಘ-ಸಂಸ್ಥೆಗಳಲ್ಲಿ ಪಡೆದಂತ ಸಾಲಕ್ಕಾಗಿ ಉದ್ಯೋಗ ಖಾತ್ರಿ ಯೋಜನೆ ಹಣ ಉಪಯೋಗವಾಗಲಿದೆ ಎಂದು ತಿಳಿಸಿದರು.
ಕಾರ್ಮಿಕ ಮಂಜುನಾಥ್ ಮಾತನಾಡಿ ನಮ್ಮ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೋಹನ್ ದಾಸ್ ರವರಿಗೆ ನಾವು ಕೂಲಿ ಕೆಲಸ ಕೊಡುವಂತೆ ಹಾನಿಯನ್ನು ಮಾಡಿಕೊಂಡ ಮೂರ್ನಾಲ್ಕು ದಿನಗಳ ಒಳಗಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಕೆಲಸ ಮಾಡುವಂತೆ ಸೂಚನೆಯನ್ನು ನೀಡಿದರು.
ಉದ್ಯೋಗ ಖಾತ್ರಿ ಯೋಜನೆ ಅಡಿಯ ಕೂಲಿ ಕೆಲಸ ಮಾಡುವುದರಿಂದ ನಮ್ಮ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಜೆ.ಪಿ ಪ್ರಿಯಾಂಕ ಎಸ್ ಪಿ ಪಾಲಯ್ಯ,ಒ ವಿ. ಸಣ್ಣೋಬಯ್ಯ, ಪಿ ಟಿ ನಾಗೇಶ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಎಂ ಎಸ್ ತಿಪ್ಪೇಸ್ವಾಮಿ, ಓಬ್ಬಕ್ಕ ,ಲಕ್ಷ್ಮೀದೇವಿ, ಕಾರ್ಮಿಕರಾದ ದುರ್ಗದ ಓಬಣ್ಣ, ಎಂ.ಪಿ ಶೇಖರಪ್ಪ,ಜೆ.ಪಿ ಗುರುವಯ್ಯ, ಕೆ ಎಸ್ ತಿಪ್ಪೇಸ್ವಾಮಿ, ಡಿ. ನಿಂಗಪ್ಪ, ಎ.ಕೆ ಅಜ್ಜಯ್ಯ, ಸುಜಾತ, ಸೇರಿದಂತೆ ಉಪಸ್ಥಿತರಿದ್ದರು