ಚಳ್ಳಕೆರೆ : ಗ್ರಾಮಗಳ ಸರ್ವತೋಮುಖ ಅಭಿವೃದ್ದಿಗೆ ಕಂಕಣ ಬದ್ದರಾಗಬೇಕಾದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ಹಣವನ್ನು ದುರುಪಯೊಗ ಪಡಿಸಿಕೊಳ್ಳುವ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗುತ್ತಲೆ ಇವೆ. ಅಂತದೊAದು ಪ್ರಕರಣ ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಮೇಲೆ ಸದಸ್ಯರು ಗಂಬೀರವಾದ ಆರೋಪ ಮಾಡಿದ್ದಾರೆ.
ಹೌದು ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಸಭೆ ನಡೆದರು ಅದರ ಸಭಾ ನಡವಳಿ ಹಾಗೂ ಸದಸ್ಯರ ಕೋರಂ ಹಾಗೂ ಕಾಮಗಾರಿ ಅನುಮೋಧನೆಗೆ ಸದಸ್ಯರ ಸಹಿ ಪಡೆದು ಅನುಮೋದಿಸುವುದು ಸರಕಾರದ ನಿಯಾಮಾವಳಿ, ಆದರೆ ಸಭಾ ನಡವಳಿ ಇಲ್ಲದೆ, ಸುಮಾರು 21.ಲಕ್ಷ ಹಣ ಡ್ರಾ ಮಾಡಿದ್ದಾರೆ ಎಂದು ಪಿಡಿಓ ಮೇಲೆ ಮಾಜಿ ಅಧ್ಯಕ್ಷ ಡಿಕೆ.ಬೋಮ್ಮಲಿಂಗಯ್ಯ ಹಾಗೂ ಸದಸ್ಯರಾದ ರಾಮಣ್ಣ ಗಂಭೀರವಾದ ಆರೋಪ ಮಾಡಿದ್ದಾರೆ,
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ಅವ್ಯವಾರದ ಬಗ್ಗೆ ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ತಾಲೂಕು ಪಂಚಾಯಿತಿ ಇಓಗೆ ಮನವಿ ನೀಡಿದ್ದೆವೆ. ಆದರೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ, ಈಗೇ ಮುಂದುವರೆದರೆ ಗ್ರಾಮ ಪಂಚಾಯಿತಿ ಮುಂದೆ ಧರಣಿ ಮಾಡುತ್ತೆವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಹಾಲಿ ಸದಸ್ಯ ರಾಮಣ್ಣ ಮಾತನಾಡಿ, ನಮ್ಮ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಹಳ್ಳಿ ಗ್ರಾಮದಲ್ಲಿ ಸ್ವಚ್ಚತೆಯಿಲ್ಲದೆ ಚರಂಡಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ರಸ್ತೆ ಮೇಲೆ ಮಲೀನವಾದ ಚರಂಡಿ ನೀರು ಹರಿಯುವುದರಿಂದ ತಗ್ಗು ಗುಂಡಿಗಳು ಬಿದ್ದು ಸಾರ್ವಜನಿಕರು ಓಡಾಡದ ಪರಸ್ಥಿತಿ ನಿರ್ಮಾಣವಾಗಿದೆ, ಈಗೀನ ಭಯಾನಕ ಡೆಂಗ್ಯೂ, ಮಲೇರೀಯಾಂತಹ ಖಾಯಿಲೆಗಳು ರಾಜ್ಯದಲ್ಲಿ ವ್ಯಾಪಿಸಿದ್ದರು. ಇಲ್ಲಿನ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ, ಇನ್ನೂ ಮನೆಯ ಇ-ಸ್ವತ್ತು ಮಾಡಿಕೊಡಲು ಸಾರ್ವಜನಿಕರಿಂದ ಹಣದ ಆರೋಪ ಕೇಳಿ ಬರುತ್ತಿದೆ. ಸುಖಾ ಸುಮ್ಮನೆ ಕಾಲವಿಳಂಬ ಮಾಡಿ ಸಾರ್ವಜನಿಕರನ್ನು ಕಛೇರಿಗೆ ಅಲೆದಾಡಿಸುತ್ತಾರೆ. ಇನ್ನೂ 17.ಫೆಬ್ರವರಿ 2023 ರಿಂದ ಸಭಾ ನಡವಳಿಯಲ್ಲಿ ಯಾವುದೇ ಕೆಲಸಗಳು ನಮೂದು ಹಾಗಿಲ್ಲ, ನಡವಳಿಯ ಪುಸ್ತಕದ ಮಧ್ಯೆ ಖಾಲಿ ಜಾಗ ಯಾವ ಉದ್ದೇಶಕ್ಕೆ ಬಿಡಲಾಗಿದೆ ಇದರ ಹಿಂದಿನ ಉದ್ದೇಶವಾದರೂ ಏನು, 15ನೇ ಹಣಕಾಸಿನಲ್ಲಿ ಯಾವುದೇ ದಾಖಲಾತಿ ಇಲ್ಲದೆ ಸು.21ಲಕ್ಷ ಹಣ ಗುಳಂ ಮಾಡಿದ್ದಾರೆ ಎಂದು ಉಪಾಧ್ಯಕ್ಷ ಅಶೋಕ್, ಸದಸ್ಯ ರಾಮಣ್ಣ, ಸಾರ್ವಜನಿಕರಾದ ನಾಗರಾಜ್, ಆಂಜನೇಯ, ಪ್ರಹ್ಲಾದ್ ಆರೋಪ ಮಾಡಿದ್ದಾರೆ.
ಈ ಕೂಡಲೇ ಸಂಬAಧಿಸಿದ ಪಿಡಿಓರವರನ್ನು ಅಮಾನತು ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕಾಮಗಾರಿಗಳನ್ನು ಹಾಗೂ 15ನೇ ಹಣಕಾಸಿಗೆ ಸಂಬAಧಿಸಿದAತೆ ತನಿಖೆ ಮಾಡಬೇಕು ಎಂದು ಗಂಭೀರವಾದ ಆರೋಪ ಮಾಡಿದ್ದಾರೆ.
ಇನ್ನೂ ದೇವರೆಡ್ಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಮಧ್ಯದ ಬಾರ್ ವೊಂದಕ್ಕೆ ಯಾವುದೇ ಪರವಾನಿಗೆ ಇಲ್ಲದೆ ಅವರಿಗೆ ಬಾರ್ ನಡೆಸಲು ಅನುಮತಿ ನೀಡಿದ್ದಾರೆ, ಇನ್ನೂ ಸದಸ್ಯರ ಗಮನಕ್ಕೆ ತಾರದೆ ಅಕ್ರಮವಾಗಿ ಬಾರ್ ಲೈಸನ್ಸ್ ನೀಡಿದ್ದಾರೆ ಎಂದು ಸದಸ್ಯರಾದ ರಾಮಣ್ಣ ಪಿಡಿಓ ಮೇಲೆ ಗಂಭೀರವಾದ ಆರೋಪ ಮಾಡಿದ್ದಾರೆ.
ಬಾಕ್ಸ್ ಮಾಡಿ :
ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಭಾ ನಡವಳಿ ಇಲ್ಲದೆ, ಕಾಮಗಾರಿ ಹಾಗೂ ಹಣ ಡ್ರಾ ಮಾಡಿರುವುದರ ಬಗ್ಗೆ ನಮಗೆ ದೂರು ನೀಡಿದ್ದರು ಅದರ ಪ್ರಕಾರ ನಮ್ಮ ಇಲಾಖೆಯಿಂದ ತಂಡ ರಚನೆ ಮಾಡಿ ತನಿಖೆ ಕೈಗೊಂಡು ಮುಂದಿನ ಕ್ರಮ ಜರುಗಿಸಲಾಗುವುದು.
- ಇಓ ಶಶಿಧರ್, ತಾಪಂ.ಕಾರ್ಯನಿರ್ವಾಹಕ ಅಧಿಕಾರಿ ಚಳ್ಳಕೆರೆ