ಚಳ್ಳಕೆರೆ : ಇತ್ತೀಚಿನ ದಿನಗಳಲ್ಲಿ ಆಂಗ್ಲ ಭಾಷೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯ ಭಾಷೆಯಾಗಿದ್ದು ನಮ್ಮ ಗ್ರಾಮೀಣ ಭಾಗದ ಮಕ್ಕಳು ತಳಮಟ್ಟದಿಂದಲೇ ಕಲಿತರೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಹುದು ಆದ್ದರಿಂದ ಎಲ್ಲ ಪೋಷಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಸಿ.ಯಲ್ಲಪ್ಪ ಹೇಳಿದರು.
ಅವರು ತಾಲೂಕಿನ ಘಟಪರ್ತಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭ ಹಾಗೂ 515ನೆಯ ನಾಡಪ್ರಭು ಕೆಂಪೇಗೌಡರ ಜನ್ಮದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು, ಗ್ರಾಮೀಣ ಪ್ರದೇಶದ ಮಕ್ಕಳು ಪ್ರಾಥಮಿಕ ಹಂತದಿAದಲ್ಲೆ ಆಂಗ್ಲ ಮಾಧ್ಯಮ ಭಾಷೆ ಕಲಿತರೆ ಮುಂದಿನ ಉತ್ತನ ವ್ಯಾಸಂಗ ಅನುಕೂಲವಾಗುತ್ತದೆ ಆದ್ದರಿಂದ ಪೋಷಕರು ಕೂಡ ಉತ್ಸಹಕರಾಗಿ ಪ್ರಾಥಮಿಕ ಹಂತದಿAದಲ್ಲೆ ಮಕ್ಕಳಿಗೆ ಉಚಿತವಾಗಿ ಆಂಗ್ಲ ಮಾಧ್ಯಮ ಶಿಕ್ಷಣ ಕೊಡಿಸುವ ಮೂಲಕ ಪ್ರೇರಕ ಶಕ್ತಿಗಳಾಗಬೇಕು ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಸಿಆರ್ಪಿ ಕೆ.ಶಿವಣ್ಣ, ಶಾಲಾ ಶಿಕ್ಷಣ ಇಲಾಖೆಯ ಸಹಕಾರದಿಂದ ಇಂದು ನಮ್ಮ ಗ್ರಾಮಕ್ಕೆ ಆಂಗ್ಲ ಮಾಧ್ಯಮ ಶಾಲೆ ಅನುಮತಿ ದೊರೆತಿರುವುದು ಅತ್ಯಂತ ಸಂತೋಷದ ವಿಚಾರ ಗ್ರಾಮೀಣ ಪ್ರದೇಶದಲ್ಲಿ ಆಂಗ್ಲ ಭಾಷಾ ಶಿಕ್ಷಣಕ್ಕೆ ಪೋಷಕರು ಹತ್ತಾರು ಕಿಲೋಮೀಟರ್ ದೂರ ಹಾಗೂ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ನಗರದತ್ತ ಮಕ್ಕಳನ್ನು ಕಳುಹಿಸುತ್ತಿದ್ದು ಅದಕ್ಕೆ ಇಂದು ಮುಕ್ತಿ ದೊರತಿದೆ. ಇತ್ತೀಚಿನ ದಿನಗಳಲ್ಲಿ ಆಂಗ್ಲ ಭಾಷೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯ ಭಾಷೆಯಾಗಿದ್ದು ನಮ್ಮ ಗ್ರಾಮೀಣ ಭಾಗದ ಮಕ್ಕಳು ತಳಮಟ್ಟದಿಂದಲೇ ಕಲಿತರೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಹುದು ಆದ್ದರಿಂದ ಎಲ್ಲ ಪೋಷಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಆರೋಗ್ಯಧಿಕಾರಿ ಡಾ.ಸಂಜೀವರೆಡ್ಡಿ ಮಾತನಾಡಿ, ಬಾಲ್ಯದಲ್ಲೆ ಕನ್ನಡದಷ್ಟು ಸರಗವಾಗಿ ಆಂಗ್ಲ ಮಾಧ್ಯಮವನ್ನು ಕಲಿತರೆ ಮುಂದಿನ ವ್ಯಾಸಂಗದಲ್ಲಿ ಎಲ್ಲಿಯೂ ಕೂಡ ಹಿನ್ನಡೆಯಾಗುವುದಿಲ್ಲ, ಇಂದಿನ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಜೊತೆಗೆ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಸರಕಾರವೇ ಉಚಿತವಾಗಿ ನೀಡುತ್ತಿರುವುದು ಸಂತಸ ತಂದಿದೆ ಆದ್ದರಿಂದ ಇದರ ಸದುಪಯೋಗ ಪ್ರತಿಯೊಬ್ಬ ಮಕ್ಕಳು ಪಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಸಿ.ಯಲ್ಲಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ನಿರಂಜನಗೌಡ, ವೈದರಾದ ಡಾ.ಸಂಜೀವರೆಡ್ಡಿ, ಗೌರಿದೇವಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ತಿಪ್ಪೇಸ್ವಾಮಿ, ವಸತಿ ಪ್ರೌಢಶಾಲೆಯ ಶಿಕ್ಷಕರಾದ ರಾಜಣ್ಣ, ಹಾಗೂ ನಾಗರಾಜಪ್ಪ ಬಿಎಂಶಾಲೆಯ ಮುಖ್ಯ ಶಿಕ್ಷಕರಾದ ಬಸವರಾಜ, ಈಶ್ವರಪ್ಪ ಹಾಗೂ ಎಲ್ಲಾ ಶಿಕ್ಷಕರು ಊರಿನ ಪೋಷಕರು ಜನ ಪ್ರತಿನಿಧಿಗಳು ಹಾಜರಿದ್ದರು.