ಚಳ್ಳಕೆರೆ : ಗ್ರಾಮದ ಕರ್ನಾಟಕ ಪಬ್ಲಿಕ್ಸ್ಕೂಲ್ನ ಪ್ರೌಢಶಾಲಾ ವಿಭಾಗದಲ್ಲಿ ಗುರುವಾರ ಪರಶುರಾಮಪುರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಂಸ್ಥೆಯ ವಿವಿಧ ಒಕ್ಕೂಟದ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಾದಕ ವಸ್ತುಗಳ ವಿರೋಧಿ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಸ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಮಾತ್ರ ನೈತಿಕ ಪಾಠ ಹೇಳಿ ಕಳುಹಿಸಿದರೆ ಜನವಸತಿ ಪ್ರದೇಶದಲ್ಲಿ ನೆರೆಹೊರೆಯವರು ಮಕ್ಕಳನ್ನು ತಮ್ಮ ದುಷ್ಚಟಗಳಿಗೆ ಸೇವಕರನ್ನಾಗಿಸಿಕೊಂಡು ಮಕ್ಕಳನ್ನೂ ಕೂಡ ದುರಭ್ಯಾಸಗಳಿಗೆ ದಾಸರಾಗಲು ಸಾರ್ವಜನಿಕರು ಪ್ರೇರೇಪಿಸುತ್ತಿರುವುದು ಆತಂಕಕಾರಿ ಸಂಗತಿ ಎಂದರು.
ಗ್ರಾಮದ ಆರಕ್ಷಕ ಠಾಣಾ ಪಿಎಸ್ಐ ಎಂ ಕೆ ಬಸವರಾಜು ಮಾತನಾಡಿ ಅಪ್ರಾಪ್ತರು ವಾಹನ ಚಾಲನೆ ಮಾಡಬಾರದು ಶಾಲಾ ಆವರಣ, ಮನೆ ಹಾಗೂ ಗ್ರಾಮದಲ್ಲಿ ಮಕ್ಕಳಿಗೆ ಯಾರಾದರೂ ದೈಹಿಕ ಮಾನಸಿಕ ತೊಂದರೆ ಮಾಡಿದರೆ ಕೂಡಲೇ ತಮ್ಮ ಪೋಷಕರು ಶಿಕ್ಷಕರಿಗೆ ತಿಳಿಸಬೇಕು ಇಲ್ಲವೇ ಪೊಲೀಸ್ ಸಹಾಯವಾಣಿಗೂ ಕರೆ ಮಾಡಿರಿ ಸಾಧ್ಯವಾದಷ್ಟೂ ದುರಭ್ಯಾಸಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಶಿಕ್ಷಕರು ಮಕ್ಕಳಿಗೆ ತಿಳಿಸಬೇಕು ಎಂದರು