ಮೂರೇ ವರ್ಷದಲ್ಲಿ ಅತ್ಯುತ್ತಮ ಸಾಧನೆ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ : ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಡಿವಿಎನ್.ಪ್ರಸಾದ್
ಚಳ್ಳಕೆರೆ ; ದಿನೆದಿನೇ ಹೆಚ್ಚುತ್ತಿರುವ ಬಯಲು ಸೀಮೆಯ ಬಿಸಿಲನ್ನು ನೀಗಿಸಲು ಸಾರ್ವಜನಿಕರು ಈ ಪ್ರದೇಶಕ್ಕೆ ಗಿಡ ಮರಗಳನು ಎತೆಚ್ಚವಾಗಿ ಬೆಳೆಸಿ ಹಸಿರುಕರಣ ಮಾಡಬೇಕು ಎಂದು ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಡಿವಿಎನ್.ಪ್ರಸಾದ್ ಹೇಳಿದರು.
ನಗರದ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಚಳ್ಳಕೆರೆ ನಗರಸಭೆ, ತಾಲೂಕು ಆರೋಗ್ಯ ಇಲಾಖೆ ಹಾಗೂ ಹೊಂಗಿರಣ ಶಾಲಾ ಸಂಸ್ಥೆಯ ಸಹಭಾಗಿತ್ವದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಾಲಾ ಕೈ ತೋಟ, ಸರಕಾರಿ ಭೂಮಿ, ರಸ್ತೆ ಬದಿ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಸುಮ್ಮನಾಗದೆ ಅವುಗಳನ್ನು ಪಾಲನೆ ಪೋಷಣೆ ಮಾಡಿ ಬೆಳೆಸಿ ಬರವನ್ನು ಹೋಗಲಾಡಿಸಲು ಹೆಚ್ಚು ಗಿಡಗಳನ್ನು ನೆಡಲು ಪ್ರತಿಯೊಬ್ಬರು ಮುಂದಾಗಬೇಕು, ಅದರಂತೆ ಪ್ರಸ್ತುತ 2024-25ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಈಡೀ ತಾಲೂಕಿಗೆ ಹೊಂಗಿರಣ ಇಂಟರ್ನ್ಯಾಷನಲ್ ಶಾಲೆಯ ಮಕ್ಕಳು ಪ್ರಥಮ ಸ್ಥಾನಗಳಿಸುವ ಮೂಲಕ ಕೇವಲ ಮೂರು ವರ್ಷದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಾಲೂಕಿನಲ್ಲಿ ಮೊದಲ ಸಾಲಿನಲ್ಲಿ ಇದ್ದರೆ, ಇನ್ನೂ ಈ ಸಾಧನೆ ಮೈಲಿಗಲ್ಲು ಮುಂದುವರೆತ್ತಾ ಸಾಗಬೇಕು ಎಂದು ಕಿವಿಮಾತು ಹೇಳಿದರು.
ಆರೋಗ್ಯ ಇಲಾಖೆಯ ಡಾ.ಕಾಶಿ ಮಾತನಾಡಿ, ಈಗೀನ ಭಯಾನಂಕ ರೋಗಗಳಲ್ಲಿ ಅತೀ ಮುಖ್ಯವಾಗಿ ಸೊಳ್ಳೆಗಳಿಂದ ಮನುಷ್ಯರಿಗೆ ಹರಡುವ ಸಾಂಕ್ರಮಿಕ ರೋಗಗಳು ಡೇಂಗ್ಯೂ, ಮಲೇರಿಯಾ, ಕಲಾರ, ಇವುಗಳನ್ನು ನಾವು ಹತೋಟಿಯಲ್ಲಿ ಇಡಬೇಕು, ನಮ್ಮ ಜಾಗೃತಿ ನಮ್ಮ ಆರೋಗ್ಯ, ಈಗೇ ಮನುಷ್ಯನ ನಿರ್ಲಕ್ಷö್ಯದಿಂದ ಸೋಳ್ಳೆಗಳು ಉತ್ಪತ್ತಿಯಾಗುತ್ತವೆ ಆದ್ದರಿಂದ ನಾವು ಜಾಗೃತರಾಗಿರಬೇಕು ಮಕ್ಕಳು ಮನೆಯಲ್ಲಿ ವಾರಗಟ್ಟಲೆ ನಿಲ್ಲುವ ನೀರಿನ ಬಗ್ಗೆ ಎಚ್ಚರಿಕೆ ವಹಿಸಬೇಕು, ಆರೋಗ್ಯದ ಬಗ್ಗೆ ಗಮನಹರಿಸಬೇಕು ಎಂದರು.
ಆರೋಗ್ಯ ಇಲಾಖೆಯ ಕುದಾಪುರ ತಿಪ್ಪೆಸ್ವಾಮಿ ಮಾತನಾಡಿ ಬಯಲು ಸೇಮೆ ಎಂಬ ಹಣೆ ಪಟ್ಟಿಯ ಜತೆಗೆ ಬರಪೀಡಿತ ಪ್ರದೇಶ ಎಂಬ ಹೆಸರನ್ನು ಹೋಗಲಾಡಿಸಲು ಹೆಚ್ಚಾಗಿ ಮರಗಿಡಗಳನ್ನು ಬೆಳೆಸಿದರೆ ಅವುಗಳು ಮೋಡಗಳ ಅಕರ್ಷಣೆ ಮಾಡಿಕೊಂಡು ಮಳೆ ಸುರಿಸುತ್ತವೆ, ಜೊತೆಗೆ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಪಾಲಿಸಿಕೊಂಡು ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದರು.
ಸಾಹಿತಿ, ಪತ್ರಕರ್ತರಾದ ಕರ್ಲಕುಂಟೆ ತಿಪ್ಪೆಸ್ವಾಮಿ ಮಾತನಾಡಿ, ಇಂದು ಅರಣ್ಯ ನಾಶದಿಂದ ಕಾಡು ಪ್ರಾಣಿಗಳು ನಾಡನ್ನು ಹರಸಿ ಬರುತ್ತಿವೆ, ಇದಕ್ಕೆ ಕಾರಣ ಮನುಷ್ಯನ ಸ್ವಾರ್ಥದಿಂದ ಇಂದು ಕಾಡು ನಶಿಸುತ್ತದೆ, ಇನ್ನೂ ಈಗೇ ಮುಂದುವರೆದರೆ ಮನುಷ್ಯ ಬಿಸಿಲಿನ ತಾಪಕ್ಕೆ ಕಳೆಗುಂದುವ ದಿನಗಳು ಭವಿಷ್ಯದಲ್ಲಿ ಬರುಬಹುದು, ಆದ್ದರಿಂದ ಪ್ರತಿಯೊಬ್ಬರು ವಿದ್ಯಾರ್ಥಿದೆಸೆಯಿಂದ ಗಿಡ ಮರಗಳನ್ನು ಬೆಳೆಸುವ ಹವ್ಯಾಸ ಬೆಳೆಸಿಕೊಳ್ಳಿ, ಮನೆಗೊಂದು ಮರ ಊರಿಗೊಂದು ವನ ಎಂಬುದು ಕೇವಲ ಬಾಯಿ ಮಾತಲ್ಲಿ ಹೇಳಿದರೆ ಸಲದು ಅದರ ಅಂಗವಾಗಿ ಇಂದು ನೀವು ನೆಟ್ಟಿರುವ ಸಸಿಗಳು ಮುಂದಿನ ಯುವ ಪೀಳಿಗೆಗೆ ಮಾರ್ಗತೋರುವ ಅರಣ್ಯವಾಗಿ ತೋರಬೇಕು ಎಂದರು.
ಇದೇ ಸಂಧರ್ಭದಲ್ಲಿ ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಡಿವಿಎನ್.ಪ್ರಸಾದ್, ಶಿಕ್ಷಕರಾದ ಶೈಲಜಾ, ಶೋಭಾ, ಮಹದೇವ್, ಮಾಲೀನಿ, ಸಿದ್ದೇಶ್, ನಗರಸಭೆ ಆರೋಗ್ಯ ನೀರೀಕ್ಷಕರಾದ ಗೀತಾ ಕುಮಾರಿ, ಗಣೇಶ್, ಸಂಜಯ್, ಹಾಗೂ ಮಕ್ಕಳು ಇತರರು ಇದ್ದರು.