ಚಳ್ಳಕೆರೆ ನ್ಯೂಸ್ :
ವಿವಿಧ ಬೇಡಿಕೆ ಈಡೇರಿಸುವಂತೆ ರೈತರಿಂದ ಪ್ರತಿಭಟನೆ
ಹೊಳಲ್ಕೆರೆ ತಾಲ್ಲೂಕಿನ ಎಲ್ಲಾ ರಸಗೊಬ್ಬರ ಅಂಗಡಿಗಳಲ್ಲಿ ರೈತರಿಗೆ
ಕಾಣುವಂತೆ, ಬಿತ್ತನೆ ಬೀಜ ಗೊಬ್ಬರಗಳ ದರ ಪ್ರಕಟಿಸಬೇಕೆಂದು
ಒತ್ತಾಯಿಸಿ,
ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನೆಡೆಸಿ ಕೃಷಿ
ಇಲಾಖೆಗೆ ಮನವಿ ನೀಡಿದರು.
ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ
ಮಾರಾಟ ಮಾಡುವ ಅಂಗಡಿಗಳ ಪರವಾನಿಗೆ ರದ್ದು ಮಾಡಬೇಕು.
ಅಕ್ರಮವಾಗಿ ರಸ ಗೊಬ್ಬರಗಳನ್ನು ದಾಸ್ತಾನು ಮಾಡಿ ಹೆಚ್ಚಿನ ದರಕ್ಕೆ
ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು
ಎಂದು ಒತ್ತಾಯಿಸಿದರು.