ಚಳ್ಳಕೆರೆ ನ್ಯೂಸ್ :
ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಇಲ್ಲ ರಸ್ತೆ ಮುಖ್ಯ ರಸ್ತೆಯಲ್ಲಿ ಜನರು ಸಂಚಾರ ಮಾಡಿದರೆ ಅಪಘಾತ ಗ್ಯಾರಂಟಿ
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದ ರಾಜ್ಯ ಹೆದ್ದಾರಿ 45 ರ ಚಳ್ಳಕೆರೆ ಜಗಳೂರು ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ.
ಹೌದು ಪಟ್ಟಣದ ಹೃದಯ ಭಾಗದಲ್ಲಿರುವ ಮುಖ್ಯ ರಸ್ತೆಯ ವಾಲ್ಮೀಕಿ ವೃತ್ತ ಹಳೆ ಬಸ್ ನಿಲ್ದಾಣ ರಸ್ತೆಗಳಲ್ಲಿ ಒಂದು ಅಡಿ ಆಳದ ಗುಂಡಿಗಳ ಹಾವಳಿ ಹೆಚ್ಚಾಗಿದೆ.
ಜನರ ಸಂಚಾರಕ್ಕೆ ತೊಂದರೆಯಾದರೂ ಕ್ಯಾರಿ ಇಲ್ಲದ ಅಧಿಕಾರಿಗಳು.
ಪ್ರತಿದಿನ ಧಾರ್ಮಿಕ ಕ್ಷೇತ್ರಕ್ಕೆ ಸಾವಿರಾರು ಜನರು ಪಟ್ಟಣಕ್ಕೆ ಬಂದು ಹೋಗುತ್ತಾರೆ ಇಲ್ಲಿನ ಮುಖ್ಯ ರಸ್ತೆಗಳ ಪರಿಸ್ಥಿತಿ ಹೇಳುತ್ತಿರುವುದು ವಾಹನ ಸಂಚಾರರಿಗೆ ಅಪಘಾತಕ್ಕೆ ಆಹ್ವಾನ ನೀಡುತ್ತಿವೆ.
ಜಗಳೂರು- ಚಳ್ಳಕೆರೆ ಈ ರಸ್ತೆಯು ಬಳ್ಳಾರಿ ರಾಯದುರ್ಗ ದಾವಣಗೆರೆ ಹೊಸಪೇಟೆ ರಸ್ತೆಗೆ ಸಂಪರ್ಕವನ್ನು ಕಲ್ಪಿಸುತ್ತದೆ ಪ್ರತಿನಿತ್ಯ ರಸ್ತೆಯಲ್ಲಿ ವಾಹನ ಸವಾರರು ಸಂಚಾರ ಮಾಡುವುದೇ ಕಷ್ಟವಾಗಿದೆ ಪಟ್ಟಣದ ವಾಲ್ಮೀಕಿ ವೃತ್ತ ಹಳೇ ಬಸ್ ನಿಲ್ದಾಣದಲ್ಲಿ ಅತಿ ಹೆಚ್ಚು ಜನಸಂದಣಿ ಇರುವ ಸ್ಥಳಗಳು.
ಈ ರೀತಿಯ ಗುಂಡಿಗಳು ಅಪಘಾತಕ್ಕೆ ಆಹ್ವಾನ ನೀಡುತ್ತಿವೆ.
ಈ ರಸ್ತೆಯಲ್ಲಿ ನಿತ್ಯ ವಿದ್ಯಾರ್ಥಿಗಳು ಕೂಲಿಕಾರ್ಮಿಕರು ರೈತರು ಹಾಗೂ ರಸ್ತೆಯ ಪಕ್ಕದಲ್ಲಿ ಸರ್ಕಾರಿ ಮಾದರಿ ಶಾಲೆ ಎಸ್ ಟಿ ಎಸ್ ಆರ್ ವಿದ್ಯಾ ಸಂಸ್ಥೆ ಇದೆ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಬಂದು ಹೋಗಬೇಕು ಸಾರ್ವಜನಿಕರು ಸಹ ಜೀವಭಯದಲ್ಲಿ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಟ್ಟಣದ ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವವರೂ ಕಾದು ನೋಡಬೇಕಾಗಿದೆ