ಚಳ್ಳಕೆರೆ ನ್ಯೂಸ್ :

ಮೊಳಕಾಲ್ಮೂರು ಕುರುಬ ಸಂಘದ ವತಿಯಿಂದ ಕುರುಬ ಸಮಾಜದ ನಿವೃತ್ತಿ ಸೈನಿಕರಾದ ಎಸ್ ಕೆ ಬಸವರಾಜ್ ರವರಿಗೆ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಿಎನ್ ಜಗದೀಶ್ ರವರು ಮಾತನಾಡಿ

ತಾಲೂಕಿನ ಪ್ರಪ್ರಥಮ ಸಮಾಜದ ಸೈನಿಕರಾಗಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಮಾಜಿ ಸೈನಿಕ ಎಸ್ ಕೆ ಬಸವರಾಜ್ ರವರು ನಮ್ಮ ಸಮಾಜದ ಗೌರವವನ್ನು ಹೆಚ್ಚಿಸಿದ್ದಾರೆ

ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಯುವಕರು ಸೈನಿಕರಾಗಿ ದೇಶ ಸೇವೆ ಮಾಡಬೇಕೆಂದು ಮನವಿ ಮಾಡಿಕೊಂಡರು

ಇದೇ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದಿನಿಂದ ತಾಲೂಕು ಕುರುಬರ ಸಂಘದ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಿದ್ದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಸಂಘದ ಅಜೀವ ಸದಸ್ಯತ್ವವನ್ನು ತಮ್ಮ ಗ್ರಾಮದ ಸಂಘದ ಸದಸ್ಯರೊಂದಿಗೆ ಸದಸ್ಯತ್ವವನ್ನು ನೊಂದಾಯಿಸಿ ರಸೀದಿ ಪಡೆಯಬೇಕೆಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಕೆ ಗುರುಲಿಂಗಪ್ಪ, ತಾಲೂಕು ಉಪಾಧ್ಯಕ್ಷರಾದ ಗಿರೀಶ್, ಪ್ರಧಾನ ಕಾರ್ಯದರ್ಶಿಯಾದ ತಿಮ್ಮಲಾಪುರ ನಾಗರಾಜ್, ಖಜಾಂಚಿ ಸಿದ್ದಪ್ಪ , ಸಂಘಟನಾ ಕಾರ್ಯದರ್ಶಿಯಾದ ತಿಪ್ಪೇಸ್ವಾಮಿ, ಹನುಮಂತಪ್ಪ , ಮಗಳಹಳ್ಳಿ ತಿಪ್ಪೇಸ್ವಾಮಿ ನಿರ್ದೇಶಕರಾದ ಸದಾ ಯರಿ ಸ್ವಾಮಿ ಪಂಪಣ್ಣ ಗೋವಿಂದಪ್ಪ ವಿರೂಪಾಕ್ಷಪ್ಪ ಉಮಾಪತಿ ಹೊನ್ನೂರಪ್ಪ ನಾಗಸಮುದ್ರ ಹೊನ್ನೂರಪ್ಪ ನೀಲೇಶ ಉಮಾಪತಿ ಸಮಾಜದ ಮುಖಂಡರುಗಳು ಉಪಸಿದ್ಧರಿದ್ದರು

About The Author

Namma Challakere Local News
error: Content is protected !!