ಚಳ್ಳಕೆರೆ ನ್ಯೂಸ್ :
ತಂದೆ ತಾಯಿ ವಯಾರುದ್ಧರಾದಾಗ ತಾರುಣ್ಯದ ಮಕ್ಕಳು
ವೈರಿಗಳಂತೆ ಕಾಣುತ್ತಾರೆ
ತಂದೆ ತಾಯಿ ನಿಜವಾದ ದೇವರು. ಅವರು ತಮ್ಮ ಮಕ್ಕಳ
ಶ್ರೇಯಸ್ಸಾಗಿ ತನು, ಮನ, ಧನದಿಂದ ಶ್ರಮಿಸುತ್ತಾರೆ.
ನಿಜವಾದ
ತ್ಯಾಗಜೀವಿಗಳು ಅಂತಹ ತಂದೆ ತಾಯಿಗಳು ವಯೋದ್ಧರಾದಾಗ
ತಾರುಣ್ಯಕ್ಕೆ ಕಾಲಿಟ್ಟ ಹಲವರು ಮಕ್ಕಳ ಹೆತ್ತವರನ್ನೇ ವೈರಿಗಳಂತೆ
ಕಾಣುವರು ಎಂದು ಸಾಣೇಹಳ್ಳಿ ಶ್ರೀಗಳು ಹೇಳಿದರು.
ಇಂದು
ಮಠದಲ್ಲಿ ನಡೆದ ಒಲಿದಂತೆ ಹಾಡುವೆ ಕಾರ್ಯಕ್ರಮದಲ್ಲಿ
ಮಾತನಾಡಿ, ಹೆತ್ತವರಿಗೆ ನೋವು ಕೊಡುವರು ತಮ್ಮ ತಲೆಯ
ಮೇಲೆ ತಾವೇ ಚಪ್ಪಡಿ ಎಳೆದುಕೊಂಡಂತೆ ಎಂದು ತಿಳಿಸಿದರು.