ವಿದ್ಯಾರ್ಥಿಗಳಿಗೆ ಯೋಗ ತುಂಬಾ ಮಹತ್ವವಾದದ್ದು ಮುಖ್ಯ ಶಿಕ್ಷಕಿ ಎಂ ಸುನಿತಾ.

ನಾಯಕನಹಟ್ಟಿ:: ಜೂನ್ 21.
ಜೀವನದಲ್ಲಿ ಸಕಾರಾತ್ಮಕ ಚಿಂತನೆ ಹಾಗೂ ಸದೃಢ ಮನೋಭಾವ ಹೊಂದಲು ಯೋಗ ನಮ್ಮ ಜೀವನದಲ್ಲಿ ಅತ್ಯಗತ್ಯ ಎಂದು ಶ್ರೀಮುಗ ಬಸವೇಶ್ವರ ಹೈಟೆಕ್ ಶಾಲೆಯ ಮುಖ್ಯ ಶಿಕ್ಷಕಿ ಎಂ ಸುನಿತಾ ಹೇಳಿದ್ದಾರೆ.

ಶುಕ್ರವಾರ ಮಲ್ಲೂರಹಳ್ಳಿ ಶ್ರೀ ಮೂಗಬಸವೇಶ್ವರ ಹೈಟೆಕ್ ಶಾಲೆಯ ಆವರಣದಲ್ಲಿ ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ಶಿಬಿರದಲ್ಲಿ ವಿದ್ಯಾರ್ಥಿಗಳ ಕುರಿತು ಮಾತನಾಡಿದ ಅವರು ಪ್ರತಿ ಮನೆ ಮನೆಗಳಲ್ಲಿ ಯೋಗ್ಯಭ್ಯಾಸ ಮಾಡಬೇಕು ಯೋಗವು ಉತ್ತಮ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಹಕಾರವಾಗಲಿದೆ. ವಿದ್ಯಾರ್ಥಿಗಳು ಸ್ವಚ್ಛತೆ ಪರಿಸರ ಸಂರಕ್ಷಣೆಯನ್ನು ಮಾಡುವ ಸೇವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಮತ್ತು ಶಿಕ್ಷಕರಿಗೆ ಉತ್ತಮವಾದ ವಿದ್ಯಾರ್ಥಿಗಳು ಎನ್ನುವ ಮಟ್ಟಿಗೆ ತಮ್ಮ ನಡೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಇದೆ ವೇಳೆ ಶಿಕ್ಷಕ ಪಾಲಯ್ಯ, ಪಾಲಾಕ್ಷ, ಶಿಕ್ಷಕಿರಾದ ಲಕ್ಷ್ಮಿ ಶಿಲ್ಪ ಜ್ಯೋತಿ ಸಂಧ್ಯಾ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು

About The Author

Namma Challakere Local News
error: Content is protected !!