ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ
ಕೃಷಿ.ತೋಟಗಾರಿಕೆ.ರೇಷ್ಮೆ, ಅರಣ್ಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ
ತಾಂತ್ರಿಕ ಸಹಾಯಕರಿಗೆ ಹಮ್ಮಿಕೊಂಡಿದ್ದ ನರೇಗಾ ಯೋಜನೆಯ ಪ್ರಗತಿ
ಪರಿಶೀಲನಾ ಸಭೆಯಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಮಾತನಾಡಿದರು.
ತಾಲೂಕು ಮಟ್ಟದ ಅಧಿಕಾರಿಗಳು
ನಿಗದಿತ ಅವಧಿಯೊಳಗೆ ನರೇಗಾ ಯೋಜನೆಡಿ
ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮೂಲಕ ದುಡಿಯುವ
ಕೈಗಳಿಗೆ ಕೆಲಸ ನೀಡುವಂತೆ ಸೂಚಿಸಿದರು.
ಪ್ರಸ್ತುತ ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರ ಹೊಲಗಳಲ್ಲಿ ಬದು
ನಿರ್ಮಾಣ. ರೇಷ್ಮೆತೆಂಗು, ಅರಣ್ಯ ಸಸಿ ನಡೆಸಲು. ಕೆರೆ
ಕಾಲುವೆ.ಕೃಷಿಹೊಂಡ, ಚೆಕ್ ಡ್ಯಾಂ ಹೂಳೆತ್ತವ ಕಾಮಗಾರಿಗಳನ್ನು
ಕೈಗೆತ್ತಿಕೊಳ್ಳುವ ಮೂಲಕ ಮಾನವ ದಿನಗಳನ್ನು ಹೆಚ್ಚಿಸುವ ಮೂಲಕ
ಕೂಲಿ ಕಾರ್ಮಿಕರಿಗೆ ಕೆಲಸ ನೀಡ ಬೇಕು.
ಆದ್ಯತೆ ನೀಡಬೇಕು ಕಡತಗಳ
ನಿರ್ವಹಣೆ . ಗುಣ ಮಟ್ಟದ ಕಾಮಗಾರಿ ಕಡತಗಳ ನಿರ್ವಹಣೆ ಮಾಡ
ಬೇಕು ಎಂದು ತಿಳಿಸಿದರು.
ಇನ್ನೂ
ನರೇಗಾ ಸಹಾಯಕ ನಿರ್ದೇಶಕ ಸಂಪತ್ ಮಾತನಾಡಿ ಬಾಕಿ ಇರುವ
ಕಾಮಗಾಗಿಗಳು ಪೂರ್ಣಗೊಳಿಸಿ ದಿನ ನಿತ್ಯ ಅಂದೇ ಕಾಮಗಾರಿಯ
ಪ್ರಗತಿಯನ್ನು ನರೇಗಾ ತಂತ್ರಾಂಶದಲ್ಲಿ ಜಿಯೋ ಟ್ಯಾಗ್ ಮಾಡ ಬೇಕು
ಯಾವುದೇ ದೂರುಗಳು ಬರದಂತೆ ಕರ್ತವ್ಯ ನಿರ್ವಹಿಸುವಂತೆ ತಾಂತ್ರಿಕ
ಸಹಾಯಕರಿಗೆ ತಿಳಿಸಿದರು.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಹಾಯಕ
ಕೃಷಿ ನೊರ್ದೇಶಕ ಡಾ.ಅಶೋಕ್.ತೋಟಗಾರಿಕೆ ಹಿರಿಯ ಸಹಾಯಕ
ನಿರ್ದೇಶಕ ಡಾ.ವಿರುಪಾಕ್ಷಪ್ಪ, ಸಾಮಾಜಿಕ ಅರಣ್ಯಾಧಿಕಾರಿ ನಿತೀನ್
ತಾಂತ್ರಿಕ ಸಹಾಯಕರು ಇದ್ದರು