ಚಳ್ಳಕೆರೆ ನ್ಯೂಸ್ :
ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿ ಸಾಂತ್ವಾನ
ಹೇಳಿದ ಸಚಿವರು
ದರ್ಶನ್ ಮತ್ತು ಗ್ಯಾಂಗ್ ನಿಂದ ಹತ್ಯೆಯಾದ ರೇಣುಕಾಸ್ವಾಮಿ
ಮನೆಗೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಭೇಟಿ
ನೀಡಿ ಸಾಂತ್ವಾನ ಹೇಳಿದರು.
ಇನ್ನೂ ಪೋಷಕರಿಗೆ ಎರಡು ಲಕ್ಷ ವೈಯುಕ್ತಿಕ ಸಹಾಯ ಧನ
ಮಾಡಿ, ನಂತರ ಅವರು ಮಾಧ್ಯಮಗಳೊಂದಿಗೆ ಮಾತಾಡಿ,
ಸರ್ಕಾರ
ಈ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ. ತನಿಖೆ ಸರಿಯಾದ
ನಿಟ್ಟಿನಲ್ಲಿ ನಡೆಯುತ್ತಿದೆ.
ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಕೆಲಸ
ಕೊಡಿಸುವ ಬಗ್ಗೆ ಪ್ರಯತ್ನ ಮಾಡುತ್ತೇನೆ. ಈಕುಟುಂಬದ ಜೊತೆಗೆ
ಸರ್ಕಾರವಿರುತ್ತದೆ. ಎಂದರು