ಚಳ್ಳಕೆರೆ ನ್ಯೂಸ್ :
ಜನರ ಮಧ್ಯೆ ಜಗದೀಶನನ್ನು ಕರೆದುಕೊಂಡು ಬರಲು
ಹರಸಾಹಸ ಪಟ್ಟ ಪೊಲೀಸರು
ಚಿತ್ರದುರ್ಗದ ರೇಣುಕಾ ಸ್ವಾಮಿ ಕಿಡ್ನಾಪ್ ಹಾಗೂ ಹತ್ಯೆ
ಆರೋಪಿಗಳಲ್ಲಿ ಒಬ್ಬನಾದ, ಜಗದೀಶನ ಮನೆಗೆ ಬಂದ
ಪೊಲೀಸರು, ಸುಮಾರು ಎರಡು ತಾಸುಗಳ ಕಾಲ, ವಿಚಾರಣೆ
ನಡೆಸಿ ಮನೆಯನ್ನು ಸಂಪೂರ್ಣ ಶೋಧಿಸಿದರು.
ಕಿಡ್ನಾಪ್ ಗೆ
ಬಳಸಿದ್ದ ಆಟೋ ವಶಕ್ಕೆ ಪಡೆದರು. ಎಲ್ಲಾ ಪ್ರಕ್ರಿಯೆ ಮುಗಿಸಿ,
ಪೊಲೀಸರು ವಾಪಾಸ್ಸು ಹೊರಡುವ ವೇಳೆಗೆ ಜನ ಜಮಾಯಿಸಿದ್ದು,
ಜನರನ್ನು ಸರಿಸಿ ಆರೋಪಿ ಜಗದೀಶನನ್ನು ಕರೆದೊಯ್ಯಲು
ಹರಸಾಹಸ ಪಡಬೇಕಾಯಿತು. ಬೇರೆ ದಾರಿಯಿಂದ ಜಗದೀಶನನ್ನು
ಪೊಲೀಸ್ ವ್ಯಾನ್ ಬಳಿ ಕರೆದುಕೊಂಡು ಬಂದರು.