ಚಳ್ಳಕೆರೆ ನ್ಯೂಸ್ :
ಉದ್ಘಾಟನೆಗೂ ಮುನ್ನವೇ ಶಾಲಾ ಕಟ್ಟಡದ ಗೋಡೆಯಲ್ಲಿ ಬಿರುಕು ಎಂಬ ತಲೆಬರಹದಡಿಯಲ್ಲಿ ನಮ್ಮ ಚಳ್ಳಕೆರೆ ಟಿವಿ ಸುದ್ದಿ ಪ್ರಸಾರ ಮಾಡಿದ ಹಿನ್ನಲೆಯಲ್ಲಿ
ಲ್ಯಾಂಡ್ ಆರ್ಮಿ ಇಲಾಖೆಯ ಜಿಲ್ಲಾ ಮಟ್ಟದ ತನಿಖಾ ತಂಡ ದಾವಿಸಿ ಕಟ್ಟಡವನ್ನು ಪರೀಶಿಲಿಸಿದರು.
ನಗರದ ಚಿತ್ರದುರ್ಗ ರಸ್ತೆಯಲ್ಲಿ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಕಟ್ಟಡ ಕಾಮಗಾರಿ ನಡೆಯುತ್ತಿದೆ.
ಆದರೆ ಕಾಮಗಾರಿ ಪೂರ್ಣಗೊಂಡ ಇಲ್ಲವಾದರೂ ಹಿಂಭಾಗದ ಗೋಡೆಯಲ್ಲಿ ಬಿರುಕು ಬಿಟ್ಟ ಹಿನ್ನಲೆಯಲ್ಲಿ ಸಾರ್ವಜನಿಕರ ಆರೋಪದಲ್ಲಿ ವರದಿ ಮಾಡಲಾಗಿತ್ತು.
ಇನ್ನೂ ಸ್ಥಳೀಯ ಶಾಸಕ ಟಿ.ರಘುಮೂರ್ತಿ, ವರದಿ ಬೆನ್ನಲೆ ಎಚ್ಚುತುಕೊಂಡು ಅಧಿಕಾರಿಗಳಿಗೆ ಚಳಿಬಿಡಿಸಿದ್ದರಿಂದ ಇಂದು ತನಿಖಾ ತಂಡ ಆಗಮಿಸಿ ಅನುಮಾನ ಕಂಡುಬರುವ ಗೋಡೆಯನ್ನು ಹೊಡೆದು ತಂತ್ರಜ್ಞಾನ ಸಾಧನದ ಮೂಲಕ ಗೋಡೆಯನ್ನು ಪರೀಶಿಲಿಸಲಾಯಿತು.