ಜೂನ್ 20 ಜೂನ್ 20 ಗುರುವಾರ ರಂದು ನಾಯಕನಹಟ್ಟಿ ಹೋಬಳಿ ವಿದ್ಯುತ್ ಪೂರೈಕೆ ಸ್ಥಗಿತ.

ನಾಯಕನಹಟ್ಟಿ:: ಜೂನ್ 20 ಗುರುವಾರರಂದು ತಳಕು ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ನಾಯಕನಹಟ್ಟಿ ಮತ್ತು ನೇರಲಗುಂಟೆ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ 1ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ನಾಯಕನಹಟ್ಟಿ ಹಾಗೂ ನೇರಲಗುಂಟೆ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಆದ್ದರಿಂದ ರೈತರು ಹಾಗೂ ಗ್ರಾಹಕರು ಸಹಕರಿಸಬೇಕಾಗಿ ಬೆಸ್ಕಾಂ ಇಲಾಖೆಯ ತಳಕು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಮತಾ ಎನ್ ಜಿ ಹಾಗೂ ನಾಯಕನಹಟ್ಟಿ ಬೆಸ್ಕಾಂ ಶಾಖೆಯ ಶಾಖಾಧಿಕಾರಿ ಎನ್ .ಬಿ.ಬೋರಣ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ಸರಬರಾಜು ಅಡಚಣೆಯಾಗುವ ಸ್ಥಳಗಳು.

ನಾಯಕನಹಟ್ಟಿ/ನೇರಲಗುಂಟೆ 66/11 ಕೆವಿ. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ಗ್ರಾಮಗಳು.. ನಾಯಕನಹಟ್ಟಿ ಪಟ್ಟಣ ಪಂಚಾಯಿತಿ,ನಲಗೇತನಹಟ್ಟಿ, ಗೌಡಗೆರೆ ,ಮಲ್ಲೂರಹಳ್ಳಿ, ನೇರಲಗುಂಟೆ, ಎನ್ ದೇವರಹಳ್ಳಿ, ತಿಮ್ಮಪ್ಪಯ್ಯನಹಳ್ಳಿ, ಹಾಗೂ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಹಳ್ಳಿಗಳಲ್ಲಿ ವಿದ್ಯುತ್ ಅಡಚಣೆ ಆಗಲಿದೆ.

Namma Challakere Local News
error: Content is protected !!