ಚಳ್ಳಕೆರೆ ನ್ಯೂಸ್ :
ಬೆಂಗಳೂರಿನಲ್ಲಿ ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಿದ ನೂತನ ಸಂಸದ ಗೋವಿಂದ ಎಂ.ಕಾರಜೋಳ
ಚಿತ್ರದುರ್ಗ:
ನಗರದ ವಿ.ಆರ್.ಎಸ್ ಬಡಾವಣೆಯಲ್ಲಿರುವ ರೇಣುಕಾ ಸ್ವಾಮಿಯ
ಕೊಲೆಯಾದ ಸಂಗತಿ ತಿಳಿದು ಮನಸ್ಸಿಗೆ ಅಘಾತವಾಗಿದ್ದು ಇಂದು
ಅವರ ಮನೆಗೆ ಚಿತ್ರದುರ್ಗ ಸಂಸದರು ಹಾಗೂ ಮಾಜಿ ಉಪ
ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳರವರು ಹಾಗೂ ಕ್ಷೇತ್ರದ
ಮಾಜಿ ಶಾಸಕರಾದ ತಿಪ್ಪಾರೆಡ್ಡಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ
ಹೇಳಿದರು.
ಸಮಾಜದಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯಬಾರದು.
ಯಾರು ಕೂಡ ಕೊಲೆ ಮಾಡುವಂತಹ ಪ್ರಯತ್ನಗಳನ್ನು ಮಾಡಬಾರದು.
ಇಂತಹ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಠಿಣ
ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಇಂತಹ
ಪ್ರಕರಣಗಳು ಮರುಕಳಿಸಿದಂತೆ ಸೂಕ್ತ ಕ್ರಮ ವಹಿಸಬೇಕು ಎಂಬುದಾಗಿ
ಅವರು ತಿಳಿಸಿದರು.