ಚಳ್ಳಕೆರೆ ನ್ಯೂಸ್ :
ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಬಂದ್ ಮಾಡಿದ್ದ ಶಾಸಕರ ಭವನ ಇಂದು ಅಧಿಕೃತವಾಗಿ ಪ್ರಾರಂಭಗೊಂಡಿತು.
ಹೌದು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ರವರ ಶಾಸಕರ ಭವನ ನಿತ್ಯವೂ ಹಸಿದವರಿಗೆ ಅನ್ನ ನೀಡುವ ನಿತ್ಯದ ದಾಸೋಹ ಕಾಯಕ ಪ್ರಾರಂಭವಾಗಲಿದೆ.
ಇನ್ನೂ ನಗರದಲ್ಲಿ ಮಿನಿ ಲೈಬ್ರರಿಯಂತೆ ಸಾರ್ವಜನಿಕರು ನಿತ್ಯವೂ ಇಲ್ಲಿಗೆ ಬಂದು ದಿನ ಪತ್ರಿಕೆಗಳನ್ನು ಹಾಗೂ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನದ ದಾಹ ತೀರಿಸಿಕೊಂಡರೆ,
ಗ್ರಾಮೀಣ ಪ್ರದೇಶಗಳಿಂದ ಸಮಸ್ಯೆಗಳನ್ನು ಒತ್ತು ತರುವ ಮುಗ್ದ ಜನರಿಗೆ ಹಸಿದವರಿಗೆ ಅನ್ನ ನೀಡುವ ಕಾಯಕ ನಿತ್ಯವೂ ನಡೆಯುತ್ತದೆ
ಇಗೇ ಶಾಸಕರ ಭವನ ಈಡೀ ಜಿಲ್ಲೆಯ ಲ್ಲಿ ಮಾದರಿಯಾಗಿ ಹೊರಹೊಮ್ಮಿದೆ
ಇದೇ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಪರುಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್,
ಪಿಟಿ ತಿಪ್ಪೇಸ್ವಾಮಿ, ಈಶ್ವರ್, ಶಾಸಕರ ಅಂಗರಕ್ಷಕ ಪ್ರೇಮ್ ಕುಮಾರ್, ಸಿಬ್ಬಂದಿ ಭೀಮಣ್ಣ, ಸೈಪುಲ್ ಹಾಗೂ ಹಲವು ಮುಂಖಡರು ಪಾಲ್ಗೊಂಡಿದ್ದರು.