ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ವಾಂತಿ, ಬೇಧಿ, ಜ್ವರ, ಕೆಮ್ಮು, ನೆಗಡಿಗಳಂತ ಸಾಂಕ್ರಾಮಿಕ
ರೋಗಗಳು ಪತ್ತೆಯಾಗುತ್ತಿದ್ದು,
ತಾಲ್ಲೂಕು ಪಂಚಾಯ್ತಿ ನೇತೃತ್ವದಲ್ಲಿ ತಾಲ್ಲೂಕು ಆರೋಗ್ಯ ಇಲ್ಲಾಖೆ
ಸಹ ಯೋಗದೊಂದಿಗೆ ಹಳ್ಳಿಗಳಲ್ಲಿ ಚರಂಡಿ, ಮನೆ ಮುಂದೆ, ಹಿಂದೆ ಕೊಟ್ಟೆ ನೀರು ನಿಲ್ಲದಂತೆ ಸ್ವಚ್ಚತೆ ಮಾಡಿ,
ಜನರಲ್ಲಿ ರೋಗದ ಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ನಗರದ ತಾಲೂಕು ಪಂಚಾಯತಿ ಮುಂಬಾಗ ಹತ್ತಾರು ರೈತ ಮುಖಂಡರೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಡಬೇಕು ಎಂದು ಒತ್ತಾಯಿಸಿ ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಸಂಪತ್ ಕುಮಾರ್, ಮನವಿ ಸಲ್ಲಿಸಿದರು.
ಇದೇ ಸಂಧರ್ಭದಲ್ಲಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾಧ್ಯಮದೊಂದಿಗೆ ಮಾತನಾಡಿ,
ಗ್ರಾಮ ಪಂಚಾಯ್ತಿ ಪಿ.ಡಿ.ಓ. ಗಳು
ಕಾಲಕಾಲಕ್ಕೆ ಚರಂಡಿ, ಕುಡಿಯುವ ನೀರಿನ ಘಟಕ,ಕುಡಿಯುವ ನೀಲಿನ ಪೈಪ್‌ಪೈಲ್‌ಗಳಲ್ಲಿ ಕೊಳಚೆ
ನೀರು ನಿಲ್ಲುವುದು ಸೇರಿದಂತೆ ಸ್ವಚ್ಛತೆ, ಶುಚಿತ್ವ ಕಾಪಾಡಬೇಕೆಂದು ಈ ಬಗ್ಗೆ ತಾಲ್ಲೂಕು ಪಂಚಾಯ್ತಿ
ಪ್ರತಿದಿನ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದರು.
ತಳಕು ಪಂಚಾಯ್ತಿ ವ್ಯಾಪ್ತಿಯ ದವಳಗಿರಿ ಕಾಲೋನಿಯ ಪಕ್ಕದಲ್ಲಿ ಹಾದು ಹೋಗುವ ಬಸವ
ನಾಲಕ್ಕೆ ಕಲುಷಿತ ನೀರನ್ನು ಅಕ್ಕ-ಪಕ್ಕ ಮನೆಯವರು ಬಿಡುತ್ತಿರುವುದು ಅಲ್ಲಿ ಸೊಳ್ಳೆ ಉತ್ಪತ್ತಿಯಾಗಿ
ಜನರಿಗೆ ವಾಂತಿ, ಬೇಧಿ, ಜ್ವರ, ಬಂದು ಆಸ್ಪತ್ರೆಗಳಿಗೆ ಬಡ ಜನರು ಸಾವಿರಾರು ಖರ್ಚು ಮಾಡುತ್ತಿದ್ದಾರೆಂದು
ದೂರು ನೀಡಿದ್ದು ಇದಕ್ಕೆ ತಡವಾಗಿ ಎಚ್ಚೆತ್ತುಕೊಂಡ ಪಂಚಾಯ್ತಿ ಅಧಿಕಾರಿಗಳು
ಸ್ವಚ್ಛಗೊಳಿಸಿ ಅಕ್ಕ-ಪಕ್ಕದ ಮನೆಯವರಿಗೆ ನಾಲಕ್ಕೆ ನೀರು ಬಿಡದಂತೆ
ಎಚ್ಚರಿಕೆ ನೋಟೀಸ್ ನೀಡಿದ್ದರು ಸಹ ಉದ್ದೇಶ ಪೂರಕವಾಗಿ ನಾಲಕ್ಕೆ ಮತ್ತೆ ನೀರು ಬಿಟ್ಟು ಪಂಚಾಯ್ತಿ
ಕಾನೂನಿಗೆ ಸವಾಲ್ ಹಾಕಿದ್ದಾರೆ
ಈ ಘಟನೆಯಲ್ಲಿ ಓರ್ವ ಕಂದಾಯ ಇಲಾಖೆ ನೌಕರರು ಸೇರಿದ್ದು,
ಇಂತಹ ಘಟನೆಗಳಿಂದ ಪರಿಸರ ಹಾಳಾಗಿ ಬಡವರು ರೋಗಗಳಿಂದ ಸಾವು ಅಪ್ಪುವುದು ನಿಚ್ಚಿತ
ಆದ್ದರಿಂದ ತಕ್ಷಣವೇ ಕಾನುನು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಮಹೇಶ್, ಚಂದ್ರಶೇಖರ, ಮಲ್ಲೇಶಪ್ಪ, ಪ್ರಶಾಂತ ರೆಡ್ಡಿ, ಶ್ರೀನಿವಾಸ್, ಮಂಜುನಾಥ್, ತಿಪ್ಪೇಸ್ವಾಮಿ, ಮಂಜಣ್ಣ, ಇತರರು ಇದ್ದರು.