ಚಳ್ಳಕೆರೆ ನ್ಯೂಸ್ :
ಮೈತ್ರಿ ಅಭ್ಯರ್ಥಿ ಕಾರಜೋಳ ಗೆಲುವು ಬಿಜೆಪಿ ಮುಖಂಡರಿಗೆ ಇಷ್ಟವಿರಲಿಲ್ಲ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಗೋವಿಂದ
ಕಾರಜೋಳ ಗೆಲುವು, ಅವರ ಪಕ್ಷದ ಮುಖಂಡರಿಗೆ ಇಷ್ಟವಿರಲಿಲ್ಲ,
ಬಿಜೆಪಿ ಮುಖಂಡರು ಯಾರೂ ಚುನಾವಣೆಯಲ್ಲಿ ಕೆಲಸ ಮಾಡಿಲ್ಲ
ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಕಾಂತರಾಜ್
ಆರೋಪಿಸಿದರು.
ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ
ಮಾತಾಡಿದರು.
ಆದರೂ ಗೆಲುವು ಸಾಧಿಸಿದ್ದೇವೆ. ಮೈತ್ರಿ ಅಭ್ಯರ್ಥಿ
ಕಾರಜೋಳ ಅವರ ಗೆಲುವು ಜೆಡಿಎಸ್, ಭಜರಂಗದಳ, ಆರ್
ಎಸ್ ಎಸ್ ಹಾಗೂ ಮೋದಿ ಅಭಿಮಾನಿಗಳ ಕೆಲಸದಿಂದ ಆಗಿದೆ
ಎಂದರು.