ಚಳ್ಳಕೆರೆ ನ್ಯೂಸ್ :
ಮಳೆಯಿಂದ ದ್ವೀಪದಂತಾದ ಗ್ರಾಮ
ತಾಲೂಕಿನ ವೀರದಿಮ್ಮನಹಳ್ಳಿ ವ್ಯಾಪ್ತಿಯಲ್ಲಿ ಒಳಚರಂಡಿ
ವ್ಯವಸ್ಥೆ ಇಲ್ಲದೆ ಸಣ್ಣ ಮಳೆ ಬಂದರೂ ನೀರು ಮನೆಗೆ ನುಗ್ಗುತ್ತದೆ.
ಇದರಿಂದಾಗಿ ಗ್ರಾಮವೇ ದ್ವೀಪದಂತಾಗುತ್ತದೆ. ಕಳೆದ ಎರಡು
ದಿನಗಳಿಂದ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ 5 ಗುಡಿಸಲು
ಮನೆಗಳು ನೆಲಕ್ಕೆ ಉರುಳಿವೆ.
ಐದು ಮನೆಗಳಿಗೆ ಸಂಪೂರ್ಣ
ಹಾನಿಯಾಗಿದೆ. ಚರಂಡಿಗಳ ನಿರ್ಮಾಣಕ್ಕೆ ಅನುಕೂಲ ಕಲ್ಪಿಸಬೇಕು
ವಿದ್ಯುತ್ ಕಂಬಗಳು ಅಳವಡಿಸಿ ಮಳೆಗಾಲದ ಅನಾಹುತಗಳನ್ನು
ತಪ್ಪಿಸಬೇಕು ಎಂದು ಗ್ರಾಮಸ್ಥ ಜಗದೀಶ್ ನಾಯ್ಕ ಒತ್ತಾಯಿಸಿದ್ದಾರೆ.