ಚಳ್ಳಕೆರೆ ಶಾಖೆಯ ಇಂಡೆಲ್ ಮನಿ ಕಂಪನಿಗೆ 2023-24ನೇ ಸಾಲಿನ ರಾಜ್ಯಪ್ರಶಸ್ತಿಗೆ ಭಾಜನ.
ಚಳ್ಳಕೆರೆ-05 ನಗರದ ಇಂಡೆಲ್‌ಮನಿ ಶಾಖೆ 2023-24ನೇ ಸಾಲಿನ ವಾರ್ಷಿಕ ಹಣಕಾಸು ವ್ಯವಹಾರಿ ರಾಜ್ಯ ಪ್ರಶಸ್ತಿಯನ್ನು ಲಭಿಸಿದೆ ಎಂದು ಹಿರಿಯ ವಲಯ ವ್ಯವಸ್ಥಾಪಕ ಎಂ.ಶೇಖರ್ ತಿಳಿಸಿದರು.
ಅವರು ನಗರದ ಇಂಡೆಲ್ ಮನಿ ಕಂಪನಿ ಶಾಖೆಯಲ್ಲಿ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಮತ್ತು 2023-24ನೇ ಸಾಲಿನ ವಾರ್ಷಿಕ ಹಣಕಾಸು ವ್ಯವಹಾರಿಕ ಕ್ಷೇತ್ರದಲ್ಲಿ ಚಳ್ಳಕೆರೆ ಶಾಖೆ ರಾಜ್ಯಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ 2023ರಲ್ಲಿ ಶಾಖೆಗೆ ವ್ಯವಸ್ಥಾಪಕರಾಗಿ ಬಂದ ವಿ.ಶ್ಯಾಮ್ ಕುಮಾರ್ ಮತ್ತು ಸಿಬ್ಬಂದಿ ವರ್ಗದ ಉತ್ತಮ ಕಾರ್ಯದಿಂದ 2023-24ನೇ ಸಾಲಿನ ವಾರ್ಷಿಕ ಹಣಕಾಸು ವ್ಯವಹಾರಿಕ ಕ್ಷೇತ್ರದಲ್ಲಿ ಶಾಖೆಗೆ ರಾಜ್ಯಪ್ರಶಸ್ತಿ ಪಡೆಯುವಂತಾಗಿದೆ ಎಂದರು.
ಶಾಖೆಯ ವ್ಯವಸ್ಥಾಪಕ ವಿ.ಶ್ಯಾಮ್ ಕುಮಾರ್ ಮಾತನಾಡಿ, ಚಳ್ಳಕೆರೆಯಲ್ಲಿ ಶಾಖೆ ಪ್ರಾರಂಭಗೊಂಡು ಸುಮಾರು ಹತ್ತು ತಿಂಗಳಲ್ಲಿ ಈ ಭಾಗದ ಸಣ್ಣ ಉದ್ದಿಮೆ ಬೆಳವಣಿಗೆಗೆ ಸಾಲ ಸೌಲಭ್ಯ ಕಲ್ಪಿಸಿ ವ್ಯಾಪಾರಿಗಳ ಅಭಿವೃದ್ಧಿ ಸಹಕರಿಸಿದ ಎಂದರು.ಕಾರ್ಯಕ್ರಮದಲ್ಲಿ ಜೆ.ಮಂಜುನಾಥ, ಎನ್.ಟಿ.ತಿಪ್ಪೇಸ್ವಾಮಿ, ದಿನೀಲ್, ಸೌಮ್ಯ ಮುಂತಾದವರು ಇದ್ದರು.